ವಿಜಯಪುರ: ಅತ್ಯಾಚಾರ ಪ್ರಕರಣ ಭೇದಿಸಿ ಹಿನ್ನಲೆ ಎಸ್ಪಿ ಎಚ್ಡಿ ಆನಂದಕುಮಾರಗೆ ಮಹಿಳೆಯರು ಸನ್ಮಾನಿಸಿ ಗೌರವಿಸಿದರು. ವಿಜಯಪುರ ನಗರದ ಎಸ್ಪಿ ಕಚೇರಿಯಲ್ಲಿ ಬುಧವಾರ ಮಹಿಳೆಯರು, ಬಿಜೆಪಿ ಮುಖಂಡ ಉಮೇಶ ವಂದಾಲ್ ನೇತೃತ್ವದಲ್ಲಿ ಎಸ್ಪಿ ಆನಂದಕುಮಾರ ಅವರಿಗೆ ಶಾಲು ಹೊದಿಸಿ ಮಹಿಳೆಯರು ಸನ್ಮಾನಿಸಿದರು. ಈ ವೇಳೆ ಎಸ್ಪಿ ಆನಂದಕುಮಾರ ಮಾತನಾಡಿ, ಕ್ರೈಂಗಳ ಕುರಿತು ಸ್ಥಳೀಯರು ಪೊಲೀಸರಿಗೆ ಸಾತ್ ನೀಡಬೇಕು. ಅಂದಾಗ ಬೇಗನೆ ಪ್ರಕರಣ ಭೇದಿಸಲು ಸಹಾಯ ಆಗುತ್ತದೆ. ಪೊಲೀಸರು ಜನಸ್ನೇಹಿ ಪೊಲೀಸರು ಆಗಿದ್ದಾರೆ. ಅಲ್ಲದೇ, ಉಮೇಶ ವಂದಾಲ ಮಾಹಿತಿ ಆಧರಿಸಿ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳ ಬಂಧನ ಮಾಡಲಾಗಿದೆ ಎಂದರು.