ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯತ್ನಾಳನ್ನು ಮುಗಿಸಲು ಪ್ರಯತ್ನ ಮಾಡಿದ್ದು, ಆದ್ರೇ, ಅಭಿವೃದ್ಧಿ, ಹಿಂದುತ್ವಕ್ಕೆ ಜಯ ಸಿಕ್ಕಿದೆ ಎಂದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಿಜಯಪುರದ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆಯಲ್ಲಿ ಕುಳಿತು ಕಳ್ಳರ ಗ್ಯಾಂಗ್ ಕುತಂತ್ರ ಮಾಡಿದರು.
ಬೆಂಗಳೂರು, ಮುಧೋಳದಿಂದ ಯತ್ನಾಳ ಮುಗಿಸಲು ಸಹಾಯ ಹಸ್ತ ಬಂದಿತ್ತು. ಆದ್ರೂ, ಹಿಂದುತ್ವ, ಅಭಿವೃದ್ಧಿಗೆ ಜನತೆ ಜೈ ಎಂದಿದ್ದಾರೆ. ಅಲ್ಲದೇ, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ.
ಹಿಂದೆ ಯಾವ ಪಾರ್ಟಿಗೂ 17 ಸೀಟ್ ಬಂದಿಲ್ಲ. ಪಕ್ಷೇತರ ಒಬ್ಬರು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ಇನ್ನು ಇಬ್ಬರು ಪಕ್ಷೇತರರು ಬಿಜೆಪಿ ಸೇರ್ಪಡೆ ಆಗ್ತಾರೆ. ಯಾರದೇ ಮುಲಾಜು ಇಲ್ಲದೇ ಬಿಜೆಪಿಯ ಮೇಯರ್, ಉಪ ಮೇಯರ್ ಮಾಡ್ತೇವಿ ಎಂದರು.