- ವಿಜಯಪುರ
- ಶ್ರೀ ತುಳಸಿಗಿರೀಶ ಫೌಂಡೇಶನ್ ಮತ್ತು ಗೋರ್ ಸೇನಾ ವತಿಯಿಂದ ಗೋರ್ ಶಿಖವಾಡಿ – ಗೋರ್ ಸೇನಾ ಸಂಸ್ಥಾಪಕರಾದ ದಿವಂಗತ ಶ್ರೀ ಕಾಶಿನಾಥ ನಾಯಕ ಅವರ ಜಯಂತಿ ಅಂಗವಾಗಿ ಚೇತನಾ ದಿವಸವನ್ನು ಆಚರಿಸಲಾಯಿತು.
ಬಂಜಾರ ಸಮುದಾಯದ ಸಂಸ್ಕೃತಿ ಮತ್ತು ಭಾಷೆಯ ಪುನರುತ್ಥಾನಕ್ಕಾಗಿ ತಮ್ಮ ಬದುಕನ್ನೇ ಸಮರ್ಪಣೆ ಮಾಡಿದ ದಿ.ಕಾಶಿನಾಥ ನಾಯಕ ಅವರ ಬದುಕು ಇಂದಿಗೂ ಸಂಘಟನೆಗಳಿಗೆ ದಾರಿದೀಪವಾಗಿದೆ. ಸಮಾಜದ ಸಂಘಟನೆಗಾಗಿ ಎಲ್ಲವನ್ನೂ ತೊರೆದು ತಮ್ಮನ್ನೇ ಸಮರ್ಪಿಸಿಕೊಂಡು ಕೇಡರ್ ಬೇಸ್ಡ್ ಸಂಘಟನೆಯನ್ನು ಕಟ್ಟಿದವರು ಎಂದು ಡಾ ಬಾಬುರಾಜೇಂದ್ರ ನಾಯಿಕ ಮಾತನಾಡಿದರು,
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ಮನೋಹರ ಐನಾಪುರ, ಶ್ರೀ ರಾಜಪಾಲ್ ಚವಾಣ್, ಶ್ರೀ ಬಿ.ಬಿ.ಲಮಾಣಿ, ಶ್ರೀ ಸುರೇಶ ಬಿಜಾಪುರ, ಶ್ರೀ ಅರುಣ ನಾಯಕ, ಶ್ರೀ ಮೋಹನ ಚವಾಣ್, ಶ್ರೀ ನಾರಾಯಣ ಪವಾರ, ಡಾ.ಬಾಬು ಲಮಾಣಿ, ಶ್ರೀ ಶೇಖರ ಚವಾಣ್, ಶ್ರೀ ರವಿ ಲಮಾಣಿ, ಡಾ.ಅರವಿಂದ ಲಮಾಣಿ, ಶ್ರೀ ರವಿ ರಾಠೋಡ್, ಶ್ರೀ ರಾಕೇಶ ರಜಪೂತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.