ವಿಜಯಪುರ: ಅತಿಕ್ರಮಣ ಪುಟ್ ಪಾತ್ ತೆರವು ಕಾರ್ಯಾಚರಣೆ ವಿಜಯಪುರ ನಗರದ ಅತ್ತಾವುಲ್ಲಾ ಸರ್ಕಲ್ ಬಳಿ ಸೋಮವಾರ ನಡೆಯಿತು. ಪುಟ್ ಪಾತ್ ಅತಿಕ್ರಮಣ ಮಾಡಿದ್ದ ಹಿನ್ನೆಲೆ ಜೆಸಿಬಿ ಮೂಲಕ ಅಂಗಡಿಗಳು ಮತ್ತು ಮನೆ ತೆರವು ಕಾರ್ಯಾಚರಣೆ ಮಾಡಲಾಯಿತು. ನೊಟೀಸ್ ನೀಡಿ ತೆರವು ಕಾರ್ಯಾಚರಣೆ ನಡೆದಿದ್ದು, ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಸಮ್ಮುಖದಲ್ಲಿ ತೆರವು ಕಾರ್ಯಾಚರಣೆ ನಡೆಯಿತು. ಅನಧಿಕೃತವಾಗಿ ನಿರ್ಮಾಣ ಮಾಡಿಕೊಂಡಿದ್ದ ಹಲವು ಅಂಗಡಿಗಳ ತೆರವುಗೊಳಿಸಿದರು.