ವಿಜಯಪುರ: ಕಾರ್ ಅಪಘಾತ ತಪ್ಪಿಸಲು ಹೋಗಿ ಒಂದು ಕಾರ್ ಪಲ್ಟಿಯಾಗಿದ್ದು, ಮತ್ತೊಂದು ಕಾರ್ ಮರಕ್ಕೆ ಡಿಕ್ಕಿಯಾಗಿರುವ ಘಟನೆ ವಿಜಯಪುರದ ತೊರವಿ ರಸ್ತೆಯಲ್ಲಿ ನಡೆದಿದೆ.
ಇನ್ನು ಕಾರ್ ಅಪಘಾತದಲ್ಲಿ ಎರಡು ಕಾರಿನ ಚಾಲಕರ ಅತೀ ವೇಗವೇ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕಾರ್ ಅಪಘಾತದಲ್ಲಿ ಇಬ್ಬರು ವಾಹನ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎರಡು ಕಾರ್ಗಳು ಜಖಂಗೊಂಡಿವೆ. ವಿಜಯಪುರ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.