ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಮೀಸಲಾತಿಗೆ ನಮ್ಮ ವಿರೋಧ ಇದೆ ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮ್ಮಿದ್ ಮುಶ್ರಿಫ್ ಹೇಳಿದರು.
ವಿಜಯಪುರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೀಸಲಾತಿಗೆ ಕಾಂಗ್ರೆಸ್ ಪಕ್ಷದಿಂದ ವಿರೋಧ ಇದೆ. ವಿಜಯಪುರದ 35 ವಾರ್ಡ್ಗಳಿಗೂ ಮೀಸಲಾತಿಯ ಮಾರ್ಗಸೂಚಿ ಪಾಲನೆ ಮಾಡಿಲ್ಲ. ಸರ್ಕಾರ ಮನಸೋ ಇಚ್ಛೆ ಮೀಸಲಾತಿ ಘೋಷಣೆ ಮಾಡಿದ್ದು, ಇದು ಖಂಡನೀಯ. ಅಲ್ಲದೇ, ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇನ್ನೂ ಮೀಸಲಾತಿ ವಿಜಯಪುರ ನಗರದ ಅಭಿವೃದ್ಧಿ ಹಿತದೃಷ್ಟಿಯಿಂದ ಮಾಡಿಲ್ಲ. ಬದಲಿಗೆ ಬಿಜೆಪಿ ಗೆಲ್ಲುವ ಸಲುವಾಗಿ ಈ ತರಹ ತಂತ್ರ ರೂಪಿಸಿದೆ. ಅಲ್ಲದೇ, ಕೆಲವೊಂದು ವಾರ್ಡ್ಗಳಲ್ಲಿ ಜನಸಂಖ್ಯೆಗಿಂತ ಓಟ್ ಜಾಸ್ತಿ ಇದೆ. ಅದರ ಅನುಗುಣವಾಗಿ ಮೀಸಲಾತಿ ಪ್ರಕಟ ಮಾಡಬೇಕಿತ್ತು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.