ವಿಜಯಪುರ ::
ಸ್ವರ ಸಂಗಮ ಕಲಾ ವೃಂದ(ರಿ ) ಬೆಂಗಳೂರು ಇವರು ಏರ್ಪಡಿಸಿದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಗುಮ್ಮಟನಗರಿ ವಿಜಯಪುರದ (ಹಿಟ್ಟಿನಹಳ್ಳಿ ಗ್ರಾಮದ) ಹೆಸರಾಂತ ಖ್ಯಾತ ಕಲಾವಿದರು ಗಾಯಕರು ಹಾಸ್ಯ ಕಲಾವಿದರು ಸಾಹಿತ್ಯಗಾರರು ನೃತ್ಯಗಾರರು ಹಾಗೂ ಹೆಸರಾಂತ ಶಿಕ್ಷಕರಾದಂತಹ ಶ್ರೀ ಹಣಮಂತರಾಯ ಶಂಕರಗೌಡ ಬಿರಾದಾರ ಇವರಿಗೆ ಕರ್ನಾಟಕ ರಾಜ್ಯದಲ್ಲಿ ಅತ್ಯುತ್ತಮ ಪ್ರಶಸ್ತಿ ಆದಂತಹ ಕರ್ನಾಟಕ ಕಲಾ ರತ್ನ ಪ್ರಶಸ್ತಿಯನ್ನು ದಿನಾಂಕ 28-06-2025 ರಂದು ಅಕ್ಕಮಹಾದೇವಿ ಸಭಾಂಗಣ ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ ಬೆಂಗಳೂರಿನಲ್ಲಿ ನೀಡಿ ಗೌರವಿಸಲಾಯಿತು.
ಈ ಒಂದು ಪ್ರಶಸ್ತಿಯ ವಿತರಣೆಯು ಹೆಸರಾಂತ ರಂಹಾಗೂ ಗಭೂಮಿ ಕಲಾವಿದರು ಹೆಸರಾಂತ ಗಾಯಕರು ಸೇರಿದಂತೆ ಸ್ವರ ಸಂಗಮ ಕಲಾ ವೃಂದದ ಕಾರ್ಯದರ್ಶಿಯಾದಂತಹ ರೆಹಮಾನ್ ಸಾಬ್ ಎಲ್ಲರೂ ಸೇರಿ ಗೌರವ ಸನ್ಮಾನ ಮಾಡಿದರು. ಅದೇ ತರನಾಗಿ ಇವರ ಬಗ್ಗೆ ತುಂಬಾ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಈ ಪ್ರಶಸ್ತಿಯ ಪಡೆದುಕೊಂಡ ಹಣಮಂತರಾಯ ಶಂಕರಗೌಡ ಬಿರಾದಾರ ಇವರ ಸಾಧನೆಯನ್ನು ಇಡಿ ಹಿಟ್ನಳ್ಳಿ ಊರು ಕೊಂಡಾಡಿದೆ. ಅದೇ ತರನಾಗಿ ವಿಜಯಪುರದ ಸರ್ವ ಕಲಾವೃಂದ, ಶಿಕ್ಷಕ ಶಿಕ್ಷಕಿ ವೃಂದವು, ಸರಸ್ವತಿ ಟ್ಯೂಟೋರಿಯಲ್ ಕ್ಲಾಸ್ ಎಲ್ಲ ವಿದ್ಯಾರ್ಥಿ ಬಳಗ ಹಾಗೂ ಗುರುಹಿರಿಯರು ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.