ವಿಜಯಪುರ: PFI, SDPI ಬೆಳೆಯಲು ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದ್ದರು.
ವಿಜಯಪುರದ ಸಿದ್ಧೇಶ್ವರ ಆಶ್ರಮಕ್ಕೆ ಮಂಗಳವಾರ ಭೇಟಿ ನೀಡಿದ ವೇಳೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯರಿಂದಲೇ ಪರಿಸ್ಥಿತಿ ಗಂಭೀರವಾಗಿದೆ.
ರಾಜ್ಯದಲ್ಲಿ PFI, SDPI ಬೆಳೆಯಲು ಸಿದ್ದರಾಮಯ್ಯ ಕಾರಣ ಎಂದರು. ಸಿದ್ದರಾಮಯ್ಯ ಅವಧಿಯಲ್ಲಿ ದೇಶ ವಿರೋಧಿ ಸಂಘಟನೆ ಬೆಳೆದಿವೆ. ನಮ ಸರ್ಕಾರ ಈಗ ಗಟ್ಟಿ ನಿರ್ಧಾರ ತೆಗೆದುಕೊಂಡಿದೆ. ದೇಶಾದ್ಯಂತ NIA ದಾಳಿ ನಡೆಸಿದೆ. ಅತಿ ಹೆಚ್ಚು ನಮ್ಮ ರಾಜ್ಯದವರನ್ನೆ ಬಂಧಿಸಿದ್ದಾರೆ ಎಂದರು. ಇನ್ನೂ PFI ನಿಷೇಧಕ್ಕೆ ದೇಶಭಕ್ತರ ಬೇಡಿಕೆ ಇದೆ. ಅದಕ್ಕೆ ಸಾಕ್ಷ್ಯಾಧಾರಗಳ ಸಂಗ್ರಹಿಸಿ ಕಟ್ಟುನಿಟ್ಟಿನ ಕ್ರಮದ ಜೊತೆಗೆ ಗಟ್ಟಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
ಅಲ್ಲದೇ, ರಾಜ್ಯದಲ್ಲಿ ಯಾರಾದ್ರು ಪೇಮೆಂಟ್ ಮುಖ್ಯಮಂತ್ರಿ ಇದ್ರೆ ಅದು ಸಿದ್ದರಾಮಯ್ಯ ಎಂದು ಕಟೀಲ್ ಗಂಭೀರ ಆರೋಪ ಮಾಡಿದರು. ಪೇಮೆಂಟ್ ಮಾಡಿ ಸಿದ್ದು ಸಿಎಂ ಆಗಿದ್ದಾರೆ. ಮೇಡಂ (ಸೋನಿಯಾಗಾಂಧಿ)ಗೆ ಪೇಮೆಂಟ್ ಮಾಡಿ ಸಿದ್ದರಾಮಯ್ಯ ಸಿಎಂ ಆಗಿರೋದು. ಖರ್ಗೆ, ಪರಮೇಶ್ವರ ಸಿನಿಯರ್, ಡಿಕೆಶಿ, ದೇಶಪಾಂಡೆಯಂತ ಲೀಡರ್ ನಡುವೆ ಸಿಎಂ ಆಗಿದ್ದು ಪೇಮೆಂಟ್ ಮಾಡಿಯೇ ಎಂದು ವಾಗ್ದಾಳಿ ಮಾಡಿದರು.
ಫೇ ಮಾಡಿಯೇ ಮೇಡಂರನ್ನ ಸಿದ್ದರಾಮಯ್ಯ ಸಂತೋಷ ಪಡೆಸಿದ್ದಾರೆ. PAYCM ಅಲ್ಲಿ ಎರಡು ಅರ್ಥ ಇದೆ. ಒಂದು ಪೇ ಸಿಎಂ ಸಿದ್ದರಾಮಯ್ಯ, ಇನ್ನೊಂದು ಪೇ ಕಾಂಗ್ರೆಸ್ ಮೇಡಂ ಎಂದು ಕಾಂಗ್ರೆಸ್ ಮೇಡಂಗೆ ವ್ಯಂಗ್ಯ ಮಾಡಿದರು.