ವಿಜಯಪುರ: ಮುರುಘಾ ಶ್ರೀಗಳ ಮೇಲೆ FIR ಆಗಲ್ಲ ಎಂದು ವಿಜಯಪುರದಲ್ಲಿ ಸಚಿವ ಉಮೇಶ ಕತ್ತಿ ಶ್ರೀಗಳ ಪರ ಬ್ಯಾಟಿಂಗ್ ಮಾಡಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುರುಘಾ ಶ್ರೀಗಳ ಮೇಲೆ FIR ಆಗಲ್ಲ. ಆದ್ರೇ, ನೋಡೋಣ, ಇದು ಒಳ ಜಗಳ ಆಗಿದೆ. ಬಸವರಾಜ್ ಹಾಗೂ ಮುರುಘಾ ಶ್ರೀಗಳ ಜಗಳವಾಗಿದ್ದು, ಇದರ ಮೇಲೆ ರಾಡಿ ಹಚ್ಚಿ ಎಲ್ಲೆಲ್ಲೂ ಹೋಗ್ತಾ ಇದೆ ಎಂದರು. ಅಲ್ಲದೇ, ಮುರುಘಾ ಶ್ರೀಗಳ ಮೇಲೆ ಆರೋಪ ಮಾಡಿದ್ದು ತಪ್ಪು.
ಇರೋರು ಎರಡು ಮೂರು ಶ್ರೀಗಳು ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದಾರೆ. ಇಂತಹ ಶ್ರೀಗಳ ಮೇಲೆ ಇಲ್ಲಸಲ್ಲದ ಆರೋಪ ಸಲ್ಲದು ಎಂದರು. ಸಮಾಜವನ್ನು ಬೇರೆ ದಿಕ್ಕಿವೇ ತೆಗೆದುಕೊಂಡು ಹೋಗಬಾರದು. ಜನರನ್ನು ತೊಂದರೆ ಸಿಗಿಸಬಾರದು. ಇನ್ನು ಕೋರ್ಟ್ ಏನು ಕ್ರಮ ತೆಗೆದುಕೊಳ್ಳುತ್ತದೇ ನೋಡೋಣ ಎಂದರು.
ನಾನು ರಾಜೀನಾಮೆ ಕೊಟ್ಟರೆ ಚಿರತೆ ಸಿಗುತ್ತದೆ ಎಂದರೆ ನಾಳೆಯೇ ರಾಜಿನಾಮೆ ನೀಡುತ್ತೇನೆ. ನಾಳೆ ಬೆಳಿಗ್ಗೆ ನಾನು ರಾಜೀನಾಮೆ ಕೊಡಲು ಸಿದ್ದ. ಚಿರತೆ ಸಿಕ್ಕರೆ ನಂದೇನು ತಕರಾರಿಲ್ಲ. ಆದ್ರೇ, ಚಿರತೆ ಹಿಡಿಯಲು ಉತ್ತರ ಕರ್ನಾಟಕ ಭಾಗದ ಸ್ಟಾಫ್ ಹಾಕಿದ್ದೇವೆ. ಆನೆಗಳನ್ನು ತಂದಿದ್ದೇವೆ. ಇಲ್ಲಿಯವರೆಗೆ ಚಿರತೆ ಯಾರಿಗೂ ಏನೂ ಮಾಡಿಲ್ಲ, ಚಿರತೆ ಇನ್ನೂ ಸಿಕ್ಕಿಲ್ಲ ಎಂದರು. ಅಲ್ಲದೇ, ಎರಡು ದಿನಗಳಿಂದ ಚಿರತೆ ಕಂಡು ಬಂದಿಲ್ಲ. ಅದು ಬೆಟ್ಟಕ್ಕೆ ಹೋಗಿರಬಹುದು ಎಂದು ಅಂದಾಜಿದಲಾಗಿದೆ. ಗೋಲ್ಫ್ ಕೋರ್ಟ್ ಸುತ್ತಮುತ್ತ ತಿರುಗಾಡುತ್ತಿದೆ ಎನ್ನಲಾಗಿದೆ ಎಂದರು.