ವಿಜಯಪುರ: ಜನ ಸಾಮಾನ್ಯರಿಗೆ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ನೂತನ ಮಹಾನಗರ ಪಾಲಿಕೆ ಸದಸ್ಯೆ ವಿಮಲಾ ರಫೀಕ್ಅಹ್ಮದ ಖಾನೆ ಹೇಳಿದರು.
ವಿಜಯಪುರ ನಗರದ ಬಡಿ ಕಮಾನ್ ಬಳಿ ನೂತನ ಜನ ಸಂಪರ್ಕ ಕಚೇರಿ ಹಾಗೂ ಕುಡಿಯುವ ನೀರಿನ ಟ್ಯಾಂಕರ್ಗೆ ಚಾಲನೆ ನೀಡಿ ಮಾತನಾಡಿದರು. ಅಲ್ಲದೇ, ವಾರ್ಡ್ ನಂಬರ 24ರಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು ಎಂದರು.
ಇನ್ನೂ ವಾರ್ಡ್ ನಂಬರ 24ರಲ್ಲಿ 24*7 ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗುವುದು. ಅದಕ್ಕಾಗಿ ಜನತೆ ಜನ ಸಂಪರ್ಕ ಕಚೇರಿಗೆ ಭೇಟಿ ನೀಡಿ ತಮ್ಮ ಕುಂದುಕೊರತೆಗಳನ್ನು ಅಹವಾಲು ನೀಡಬಹುದು. ಅವುಗಳನ್ನು ತಕ್ಷಣವೇ ಈಡೇರಿಸಲಾಗುವುದು ಎಂದರು.