ವಿಜಯಪುರ: ಮಹಿಳೆಯನ್ನು ಕಿಡ್ನ್ಯಾಪ್ ಮಾಡಿ, ಹಣಕ್ಕೆ ಬೇಡಿಕೆಯಿಟ್ಟದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.
ಸಾಗರ ಜುಮ್ಮನಗೋಳ, ಶಿವಾಜಿ ಉಪ್ಪಾರ, ಆಕಾಶ ವೀರಕರ, ಆದರ್ಶ ಕೊಟ್ಯಾಳ ಬಂಧಿತ ಆರೋಪಿಗಳು. ಇನ್ನು ಕನಕದಾಸ ವೃತ್ತದ ಬಳಿ ಲಕ್ಷ್ಮಿ ಸೊನ್ನದನ್ನು ಆಟೋದಲ್ಲಿ ಕಿಡ್ನ್ಯಾಪ್ ಗೈದು 5 ಲಕ್ಷಕ್ಕೆ ಹಣಕ್ಕೆ ಬೇಡಿಕೆಯಿಟ್ಟಿದರು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಪೊಲೀಸರು ಆರೋಪಿಗಳ ಬಂಧನ ಮಾಡಿದ್ದಾರೆ. ಈ ಕುರಿತು ವಿಜಯಪುರ ಮಹಿಳಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.