K1N ಡೆಸ್ಕ್: ಭಾರತ ಕ್ರಿಕೆಟ್ ತಂಡದ ಕಿಂಗ್ ಅಂತಾ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿಗೆ ಪ್ರಪಂಚದಾದ್ಯಂತದ ಅಭಿಮಾನಿಗಳಿದ್ದಾರೆ. ಅಪಾರ ಪ್ರಮಾಣದ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿರುವ ಕಿಂಗ್ ಕೊಹ್ಲಿಯನ್ನು ಆರಾಧಿಸುವ ಕೋಟ್ಯಾಂತರ ಅಭಿಮಾನಿಗಳ ಪೈಕಿ ಇದೀಗ ಆಪ್ಪಟ ಅಭಿಮಾನಿ ವಿಶೇಷವಾಗಿ ತಮ್ಮ ನೆಚ್ಚಿನ ಕಿಂಗ್ ಕೊಹ್ಲಿಗೆ ಗೌರವ ಸಲ್ಲಿಸಿದ್ದಾರೆ. ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿ ಮತ್ತು ಕಲಾವಿದ 22 ಸೆಕೆಂಡ್ಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಅಭಿಮಾನಿ ತಮ್ಮ ನಾಲಿಗೆಗೆ ಬಣ್ಣವನ್ನು ಸವರಿಕೊಂಡು ಬಿಳಿ ಹಾಳೆಯ ಮೇಲೆ ವಿರಾಟ್ ಕೊಹ್ಲಿಯ ಕಲಾಕೃತಿ ಅನಾವರಣ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
https://x.com/mufaddal_vohra/status/1700558648291004916?t=ZolIJHMx4fcZ9enllMNqNQ&s=09