K1N ಡೆಸ್ಕ್: ನಟಿ ಸಂಯುಕ್ತಾ ಹೆಗ್ಡೆ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಕೂಡ ಆಗಿತ್ತು.
ಇದೀಗ ಸಂಯುಕ್ತಾ ದುಬೈಗೆ ಹೋಗಿ ತಮ್ಮ ಬೇಸಿಗೆ ರಜೆಯನ್ನು ಖುಷಿಯಿಂದ ಕಳೆಯುತ್ತಿದ್ದಾರೆ. ದುಬೈನಲ್ಲಿ ಕಳೆದ ಸಿಹಿ ಕ್ಷಣಗಳನ್ನು ಸಂಯುಕ್ತ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಸ್ವಿಮ್ಮಿಂಗ್ ಡ್ರೆಸ್ ಹಾಕಿಕೊಂಡು ಸ್ವಿಮ್ಮಿಂಗ್ ಫೂಲ್ ನಲ್ಲಿ ಈಜುತ್ತಿರುವ ವೀಡಿಯೋವನ್ನು ನಟಿ ಸಂಯುಕ್ತ ಹಂಚಿಕೊಂಡಿದ್ದಾರೆ. ಸ್ವಿಮ್ಮಿಂಗ್ ಡ್ರೆಸ್ ನಲ್ಲಿ ಹಾಟ್ ಎಂಡ್ ಬೋಲ್ಡ್ ಆಗಿ ಕಾಣಿಸಿದ್ದಾರೆ.