ವಿಜಯಪುರ: ಪಿಎಂ ಜನಧನ ಯೋಜನೆ ಹೆಸರಿನಲ್ಲಿ ವ್ಯಕ್ತಿಗೆ ಆನ್ಲೈನ್ ಮೂಲಕ ಲಕ್ಷಾಂತರ ನಗದು ವಂಚನೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ತಳೇವಾಡ ಗ್ರಾಮದಲ್ಲಿ ನಡೆದಿದೆ.
ತಳೇವಾಡ ನಿವಾಸಿ ಹಣಮಂತ ಜೆಟ್ಟೆಪ್ಪಗೊಳ ಮೋಸ ಹೋದವರು. ಇನ್ನು ವಾಟ್ಸ್ಆಫ್ ಮೂಲಕ ಜನಧನ ಯೋಜನೆಯಡಿಯಲ್ಲಿ ಲೋನ್ ನೀಡುವ ಭರವಸೆ ನೀಡಿ ಎಂಟು ಬಾರಿ ಹಣ ಪಡೆದುಕೊಂಡು ಸುಮಾರು 1.71 ಲಕ್ಷ ಪಂಗನಾಮ ಹಾಕಿದ್ದಾರೆ. ಅದಕ್ಕಾಗಿ ಮೋಸ ಹೋಗಿರುವ ಹಣಮಂತ ದೂರು ದಾಖಲು ಮಾಡಿದ್ದಾರೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.