ವಿಜಯಪುರ: ಭೀಮಾತೀರದ ನಟೋರಿಯಶ್ ಹಂತಕ ಮಲ್ಲಿಕಾರ್ಜುನ ಚಡಚಣನ ಮೇಲೆ ಉದ್ಘೋಷಣೆ ಮಾಡಲಾಗಿದೆ ಎಂದು ಎಸ್ಪಿ ಎಚ್ಡಿ ಆನಂದಕುಮಾರ ಹೇಳಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಚಡಚಣನ ಮೇಲೆ 20 ಕೇಸ್ಗಳಿವೆ. ರೌಡಿಶೀಟರ್ ಸಾಹುಕಾರ್ ಮೇಲೆ 40 ಜನರು ಹತ್ಯೆಗೆ ಯತ್ನಿಸಿದ್ದರು. ಈ ಪ್ರಕರಣದಲ್ಲಿ 36 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಆದ್ರೇ, ಚಡಚಣ, ವಿಮಲಾಬಾಯಿ ಸೇರಿ ಇನ್ನಿಬ್ಬರು ಪರಾರಿಯಾಗಿದ್ದಾರೆ. ಅದಕ್ಕಾಗಿ ಉಳಿದ ನಾಲ್ವರು ಆರೋಪಿಗಳನ್ನು ಆದಷ್ಟು ಬೇಗನೆ ಬಂಧನ ಮಾಡಲಾಗುವುದು ಎಂದರು.
ಇನ್ನು ಮಲ್ಲಿಕಾರ್ಜುನ ಚಡಚಣ ಮೊಬೈಲ್ ಬಳಕೆ ಮಾಡುತ್ತಿಲ್ಲ. ಇದರಿಂದ ಆತನ ಸುಳಿವು ಸಿಗುತ್ತಿಲ್ಲ. ಅಲ್ಲದೇ, ಪೊಲೀಸರಿಗೆ ಶರಣಾಗುವಂತೆ ಉದ್ಘೋಷಣೆ ಹೊರಡಿಸಿ, ಚಡಚಣ ಭಾಗದಲ್ಲಿ ಡಂಗೂರ ಮೂಲಕ ಜಾಗೃತಿ ಮಾಡಲಾಗಿದೆ. ಚಡಚಣ, ವಿಮಲಾಬಾಯಿ ಶರಣಾಗತಿ ಆಗದಿದ್ರೇ ಆಸ್ತಿ ಮುಟ್ಟುಗೋಲು ಹಾಕಲಾಗುತ್ತದೆ ಎಂದರು.
*ಕಿಡ್ನ್ಯಾಪ್, ರಾಬರಿ ಕೇಸ್*
ಮತ್ತೊಂದೆಡೆ ಭೀಮಾತೀರದಲ್ಲಿ ಎರಡು ಕಿಡ್ನ್ಯಾಪ್ ಹಾಗೂ ಒಂದು ರಾಬರಿ ಕೇಸ್ ಭೇದಿಸಲಾಗಿದೆ. ಒಂದು ಸಿಂದಗಿ, ಒಂದು ಇಂಡಿ ಕಿಡ್ನ್ಯಾಪ್ ಕೇಸ್ ಹಾಗೂ ಒಂದು ಚಡಚಣ ರಾಬರಿ ಕೇಸ್ನಲ್ಲಿ ಆರೋಪಿಗಳನ್ನು ಒಂದು ದಿನದಲ್ಲೇ ಭೇದಿಸಲಾಗಿದೆ. ಅಲ್ಲದೇ, ಚಡಚಣ ರಾಬರಿ ಕೇಸ್ನಲ್ಲಿ ಮೂವರು ಆರೋಪಿ, ನಗದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು.