ವಿಜಯಪುರ: ಹಿಂದೂ ಹುಲಿ ಯತ್ನಾಳ್ಗೆ ಬಿಗ್ ಶಾಕ್ ಎದುರಾಗಿದ್ದು, ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಲಾಗಿದೆ.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಹೈಕಮಾಂಡ್ 6 ವರ್ಷಗಳ ಕಾಲ ಉಚ್ಛಾಟಿನೆ ಮಾಡಿದೆ. ಯತ್ನಾಳ್ ಪಕ್ಷ ವಿರೋಧಿ ಹೇಳಿಕೆ ನೀಡಿರುವ ಹಿನ್ನಲೆ ಅವರನ್ನು ಕೇಂದ್ರ ಶಿಸ್ತು ಸಮಿತಿ ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ. ವಿಜಯೇಂದ್ರ ವಿರುದ್ಧ ಗುದ್ದಾಡಲು ಹೋದ ಯತ್ನಾಳ್ಗೆ ಇದೀಗ ರಾಜ್ಯಾಧ್ಯಕ್ಷ ಪಟ್ಟವೂ ಇಲ್ಲ.. ಎಲೆಕ್ಷನ್ಗೆ ಸೀಟೂ ಇಲ್ಲದಂತ ಪರಿಸ್ಥಿತಿ ಉಂಟಾಗಿದೆ.