ವಿಜಯಪುರ: ಲಾಕ್ ಮಾಡಿ ನಿಲ್ಲಿಸಿದ ಬೈಕ್ ಕಳ್ಳತನ ಮಾಡುತ್ತಿದ್ದ ಬೈಕ್ ಕಳ್ಳನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.
![](https://karnataka1news.com/rugleeps/2022/06/IMG-20220622-WA0019.jpg)
ಬಸವನಗರದ ನಿವಾಸಿ ಮಹ್ಮದ್ಹನೀಪ್ ಅಲ್ಲಾಭಕ್ಷ ಸವದಿ (25) ಬಂಧಿತ ಆರೋಪಿ. ಪೇಟಿಂಗ್ ಕೆಲಸ ಮಾಡಿಕೊಂಡಿದ್ದ ಈತ ಸಾರ್ವಜನಿಕ ಸ್ಥಳಗಳಲ್ಲಿ ಬೈಕ್ಗಳನ್ನು ಲಾಕ್ ಮಾಡಿ ಇರಿಸಿದ್ದಾಗ ಲಾಕ್ ಮುರಿದೋ ಅಥವಾ ಮೋಟರ್ ಸ್ಟಾರ್ಟರ್ಗೆ ನೇರ ಸಂಪರ್ಕ ಕಲ್ಪಿಸಿ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದ. ಚುರುಕಿನ ಕಾರ್ಯಾಚರಣೆ ನಡೆಸಿದ ತಂಡ ಆರೋಪಿಯನ್ನು ಬಂಧಿಸಿ 1.70 ಲಕ್ಷ ರೂ.ಮೌಲ್ಯದ ಮೂರು ಬೈಕ್ ವಶಕ್ಕೆ ಪಡೆದಿದ್ದಾರೆ. ಗೋಳಗುಮ್ಮಟ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.