ವಿಜಯಪುರ: ಲಂಚ ಪಡೆಯುವಾಗ ಜಿಲ್ಲಾ ವಕ್ಪ್ ಬೋರ್ಡ್ ಆಡಿಟರ್‌ಹಾಗೂ ಆತನ ಸಹೋದರ ಇಬ್ಬರೂ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಡೆದಿದೆ. ವಕ್ಸ್ ಬೋರ್ಡ್ ಆಡಿಟರ್‌ಮಹಮ್ಮದ ಮೊಹಸೀನ್ ಜಮಖಂಡಿ ಹಾಗೂ ಈತನ ಸಹೋದರ ಮುಜಾಹಿದ್ ಜಮಖಂಡಿ ಲೋಕಾಯುಕ್ತ ಬಲೆಗೆ ಬಿದ್ದವರು. ಒಂದೂವರೆ ಲಕ್ಷ ಹಣ ಪಡೆಯುವಾಗ ದಾಳಿ ಮಾಡಿದ ಲೋಕಾಯುಕ್ತರು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಕ್ ಬೋರ್ಡ್ ಆಧೀನದಲ್ಲಿ ಬರುವ ಕಮೀಟಿಯೊಂದರ ನವೀಕರಣ ಮಾಡಲು ಲಂಚದ ಬೇಡಿಕೆ ಇಟ್ಟದ್ದರು. ಖಾಜಾಸಾಬ್ ನದಾಫ್ ಎಂಬುವವರ ದೂರಿನನ್ವಯ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.