ವಿಜಯಪುರ: ಲವ್ ಅಫೇರ್ ಹಿನ್ನಲೆ ಓರ್ವನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಎಸ್ಪಿ ಎಚ್ಡಿ ಆನಂದಕುಮಾರ ಮಾಹಿತಿ ನೀಡಿದರು. ವಿಜಯಪುರ ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇನ್ನು ಆಲಮೇಲ ಪಟ್ಟಣದ ಕಡಣಿ ಗ್ರಾಮದ ಪ್ರಶಾಂತ ಕ್ಷತ್ರಿನ್ನು ಭೀಕರವಾಗಿ ಹತ್ಯೆಗೈದಿದ್ದರು. ಅದಕ್ಕಾಗಿ ಆಲಮೇಲ ಪೊಲೀಸರು ತನಿಖೆಕೈಗೊಂಡು ಆರು ಜನರನ್ನು ಬಂಧಿಸಿದ್ದಾರೆ. ಅಲ್ಲದೇ, ಆರು ಜನರನ್ನು ಬಂಧಿಸಿ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಮತ್ತೊಂದೆಡೆ ಡಾಬಾದಲ್ಲಿ ಚಹಾ ಕುಡಿಯುವ ಟೇಬಲ್ಗಾಗಿ ಹತ್ಯೆಗೈದಿರುವ ನಾಲ್ವರು ಆರೋಪಿಗಳ ಬಂಧನ ಮಾಡಲಾಗಿದೆ. ಗಣಪತಿಸಿಂಗ್ ರಜಪೂತನ್ನು ಹತ್ಯೆಗೈದು ಪರಾರಿಯಾಗಿದ್ದರು. ಮತ್ತೋರ್ವನ ಗಾಯಗೊಂಡಿದ್ದಾನೆ. ಅದಕ್ಕಾಗಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಪಿಎಸ್ಐ ಉಪ್ಪಾರ ನೇತೃತ್ವದ ತಂಡದವರು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದರು.