ವಿಜಯಪುರ: ವಿಜಯಪುರ: ಉದ್ಯೋಗದ ಆಸೆ, ಡಾಲರ್ ಡಾಲರ್ ಆಮಿಷ.. ವಿದೇಶದಲ್ಲಿ ಐಷಾರಾಮಿ ಜೀವನ ನಂಬಿ ದ್ರಾಕ್ಷಿ ನಾಡಿನ ಇಬ್ಬರು ಯುವಕರು ನರಕಯಾತನೆ.. ಹೌದು..! ಉದ್ಯೋಗದ ಆಮಿಷ ತೋರಿಸಿ ಕುವೈತ್ಗೆ ಹೋಗಿದ್ದ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅಡವಿಸಂಗಾಪುರ ಗ್ರಾಮದ ಯುವಕರ ಕಣ್ಣೀರಿನ ಕಥೆ ಇದು. ಉದ್ಯೋಗದ ಆಮಿಷಕ್ಕೆ ಬಲಿಯಾಗಿ ಕುವೈತ್ಗೆ ಹೋಗಿ ಸಚಿನ ಜಂಗಮ ಶೆಟ್ಟಿ, ವಿಶಾಲ ಶ್ರೀಕಾಂತ ಸೇಲರ ವ್ಯಕ್ತಿಯೊಬ್ಬ ಕುವೈತ್ಗೆ ಕರೆದೊಯ್ದು ಅಲ್ಲಿ ಹೇಳಿದ ಉದ್ಯೋಗ ಕೊಡದೆ, ಊಟ, ವಸತಿ ಕಲ್ಪಿಸದೆ ಹಿಂಸೆ ನೀಡಿದ್ದಾರೆ. ಅಲ್ಲಿ ತರಕಾರಿ ಪ್ಯಾಕಿಂಗ್ ಕೆಲಸ ಎಂದು ಹೇಳಿ ಅಲ್ಲಿ ಒಂಟೆ ಕಾಯಲು ಹೇಳಿದ್ದರು. ಹೊಡೆದು, ಬಡಿದು ಚಾಕು ತೋರಿಸಿ ಹೆದರಿಸುತ್ತಿದ್ದರು. ಫೋನ್ ಕಸಿದುಕೊಳ್ಳುತ್ತಿದ್ದರು. ಬಾಂಬೆ ಏಜೆಂಟ್ ಇಫ್ಕಾರ ಎಂಬಾತ ಹೊರದೇಶಕ್ಕೆ ಕಳುಹಿಸಿದ್ದ. ಸಲ್ಮಾನ್ ಬರಾಕ್ ಎಂಬಾತ ನಮ್ಮನ್ನು ನಡೆಸಿಕೊಂಡರು. ನಮ್ಮಂತೆ ಕುವೈತ್ನಲ್ಲಿ ಅನೇಕರಿದ್ದಾರೆ. ಅಂದಾಜು 50 ಜನ ಮಹಿಳೆಯರು ಹಾಗೂ 70 ಜನ ಪುರುಷರು ಇನ್ನೂ ಇದ್ದಾರೆ. ಕರ್ನಾಟಕದವರೇ ಇನ್ನೂ ಇಬ್ಬರಿದ್ದಾರೆ. ಮಲಕಪ್ಪ ಸಂಗಮೇಶ ಹಾಗೂ ವಿಠಲ್ ಜಕನೂರ ಎಂಬುವರು ನಮ್ಮೂರವರೇ ಇನ್ನೂ ಇದ್ದಾರೆ. 32 ಸಾವಿರ ಸಂಬಳ ಎಂದು ಹೇಳಿದ್ದರು. ಅಲ್ಲಿ ಕಡಿಮೆ ಸಂಭಳ ಕೊಟ್ಟರು. ಅದರಲ್ಲೂ ಆರು ತಿಂಗಳ ಪೈಕಿ ಮೂರು ತಿಂಗಳ ಸಂಬಳ ಮಾತ್ರ ಕೊಟ್ಟರು. ಇನ್ನಷ್ಟು ಬಾಕಿ ಇರಿಸಿಕೊಂಡಿದ್ದರು. ಒಂದು ಲಕ್ಷ ರೂಪಾಯಿ ಏಜೆಂಟ್ ಗೆ ಕೊಟ್ಟಿದ್ದೇವೆ. ಅವರಿಗೆ ಹೇಳದೆ ರಾಯಭಾರಿ ಕಚೇರಿಗೆ ಬಂದು ಅಲ್ಲಿಂದ ಮುಂಬೈಗೆ ಬಂದು ಅಲ್ಲಿಂದ ತವರಿಗೆ ಮರಳಿದೆವು. ಇನ್ನು ಸಂಸದರು ಇಲ್ಲದೇ ಹೋದರೆ ನಾವು ಅಲ್ಲೇ ಸಾಯುತ್ತಿದ್ದೆವು. ಸಂಸದರ ಉಪಕಾರ ಎಂದೂ ಮರೆಯಲ್ಲ ಎಂದು ವಿಶಾಲ ಹೇಳಿದರು. ಅಲ್ಲದೇ, ಸಂಸದರಿಗೆ ಭೇಟಿ ಮಾಡಿ ಅವರ ಪತ್ರದ ಸಹಾಯದಿಂದ ವಿದೇಶಾಂಗ ಸಚಿವರನ್ನು ಭೇಟಿ ಮಾಡಿ ಅವರನ್ನು ಕರೆಯಿಸಿಕೊಳ್ಳುವ ಪ್ರಯತ್ನ ಮಾಡಿದ್ದೇವೆ ಎಂದು ಬಿಜೆಪಿ ನಾಯಕ ಉಮೇಶ ಕೋಳ್ಕೂರ ತಿಳಿಸಿದರು.