ವಿಜಯಪುರ: ಮನೆಯಲ್ಲಿ ಯಾರಿಗೂ ಹೇಳದೇ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ವಿಜಯಪುರ ನಗರದ ಭೂತನಾಳ ತಾಂಡಾದಲ್ಲಿ ನಡೆದಿದೆ. 45 ವರ್ಷದ ನಾಮದೇವ ಚವ್ಹಾಣ ನಾಪತ್ತೆಯಾಗಿರುವ ವ್ಯಕ್ತಿ. ಇನ್ನೂ ನಾಮದೇವ ನೀಲಿ ಬಣ್ಣದ ಶರ್ಟ್ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಅಲ್ಲದೇ, ಮಾತನಾಡಲು ಬರುವುದಿಲ್ಲ ಎಂದು ಆದರ್ಶನಗರ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ. ಅದಕ್ಕಾಗಿ ಈ ಕುರಿತು ಮಾಹಿತಿ ಲಭ್ಯವಾದ್ರೇ ಆದರ್ಶನಗರ ಪೊಲೀಸ ಠಾಣೆಯ 9480804250 ನಂಬರಗೆ ಸಂಪರ್ಪಿಸುವಂತೆ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಆದರ್ಶನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.