ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆ ಹಿನ್ನಲೆ ವಾರ್ಡ್ ನಂಬರ 14ರಲ್ಲಿ ಕಿಡಿಗೇಡಿಗಳು ಮಾಟ ಮಂತ್ರದ ಮೊರೆ ಹೋಗಿದ್ದಾರೆ.
ವಿಜಯಪುರ ನಗರದ ಶಿಖಾರಖಾನೆಯ ಅನಂತ ಲಕ್ಷ್ಮಿ ಹಾಲ್ ಬಳಿ ಕಿಡಿಗೇಡಿಗಳು ಮಾಟ ಮಂತ್ರ ಮಾಡಿ ನಿಂಬೆಹಣ್ಣು, ಎಲೆ, ಮೊಟ್ಟೆ, ಹಣ ಸೇರಿದಂತೆ ಹೂವುಗಳೊಂದಿಗೆ ಮಾಟ ಮಂತ್ರ ಮಾಡಿ ಎಸೆದು ಹೋಗಿದ್ದಾರೆ. ಅಲ್ಲದೇ, ಸ್ಥಳೀಯರು ಈ ಮಾಟ ಮಂತ್ರ ಹಿನ್ನಲೆ ಗಾಭರಿಗೊಂಡಿದ್ದಾರೆ. ಅದಕ್ಕಾಗಿ ಈ ಮಾಟ ಮಂತ್ರ ಮಾಡಿರುವ ಕಿಡಿಗೇಡಿಗಳ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಬೇಕು ಎಂದು ಆಗ್ರಹಿಸಿದ್ದಾರೆ.