ವಿಜಯಪುರ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ಲಾಸ್ಟಿಕ್ ಅಂಗಡಿಗಳ ಮೇಲೆ ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿಗೈದಿರುವ ಘಟನೆ ವಿಜಯಪುರ ನಗರದ ಗಣಪತಿ ಚೌಕ್ನಲ್ಲಿ ನಡೆದಿದೆ.
ಮಹಾನಗರ ಪಾಲಿಕೆ ಆಯುಕ್ತ ಮೆಕ್ಕಳಕಿ ಆದೇಶದ ಮೇರೆಗೆ ಅಧಿಕಾರಿಗಳು ವಿವಿಧ ನಾಲ್ಕು ಅಂಗಡಿಯ ಮೇಲೆ ದಾಳಿಗೈದು ಸುಮಾರು ಒಂದು ಲಕ್ಷ ಮೌಲ್ಯದ 2600 ಕ್ವಿಂಟಲ್ ಪ್ಲಾಸ್ಟಿಕ್ ಗಳನ್ನು ಜಪ್ತಿಗೈದಿದ್ದಾರೆ. ದಾಳಿ ವೇಳೆಯಲ್ಲಿ ಕಂದಾಯ ನಿರೀಕ್ಷಕ ಆಜಾದ್ ಹಂಚಿನಾಳ, ಹೆಲ್ತ್ ಇನ್ಸ್ಪೆಕ್ಟರ್ ಪರ್ವಿಣ್ ಓವಿ, ರಫೀಕ್, ಬಿರಾಳ ಉಪಸ್ಥಿತರಿದ್ದರು.