ಕಲಬುರಗಿ: ಪಠಾಣ್ ಚಿತ್ರದಲ್ಲಿ ನಟಿ ದೀಪಿಕಾ ಪಡಕೋಣೆ ಕೇಸರಿ ಬಿಕನಿ ವಿವಾದ ವಿರುದ್ಧ ಹಿಂದೂ ಹುಲಿ ಘರ್ಜಿಸಿದೆ. ಕಲಬುರಗಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಉದ್ದೇಶಪೂರ್ವಕವಾಗಿ ಕೇಸರಿ ಬಣ್ಣ ಅಪಮಾನ ಮಾಡಲಾಗ್ತಿದೆ. ಶೀಘ್ರವೇ ಶಾರೂಕ್ ಖಾನ್ ಮಣ್ಣು ಮುಕ್ಕುತ್ತಾನೆ ಎಂದು ವಾಗ್ದಾಳಿ ನಡೆಸಿದರು. ಈಗಾಗಲೇ ಅಮಿರ್ಖಾನ್ ಸಿನಿಮಾ ಇಲ್ದೆ ಕುಂತಾನ್. ಅದೇ ರೀತಿ ಶಾರೂಕ್ಖಾನ್ ಕೂಡ ಹಂಗೇ ಆಗ್ತಾನ್ ಎಂದರು.
ಅಲ್ಲದೇ, ದೇ ಆರ್ ಆಲ್ ಮೈ ಬ್ರದರ್ ಅಂತಾ ಡಿಕೆಶಿ ಹೇಳ್ತಿರ್ತಾರೆ. ಹಾಗಾಗಿ ಭಯೋತ್ಪಾದಕರು ಸಹ ಡಿಕೆಶಿಯ ಬ್ರದರ್ಸ್ ಎಂದು ಡಿಕೆ ಶಿವಕುಮಾರ್ ವಿರುದ್ಧ ಯತ್ನಾಳ ವಾಗ್ದಾಳಿ ಮಾಡಿದರು. ಡಿಕೆಶಿಗೆ ಕುಕ್ಕರ್ ಮ್ಯಾಲೇ ಬಹಳ ಪ್ರೀತಿ ಇದೆ. ಡಿಕೆಶಿಗೆ ಮಂಗಳೂರು ಕುಕ್ಕರ್ ಹಾಗೂ ಬೆಳಗಾವಿ ಕುಕ್ಕರ್ ಮ್ಯಾಲು ಡಿಕೆಶಿಗೆ ಪ್ರೀತಿ ಇದೆ ಎಂದು ಕುಟುಕಿದರು.