K1N ಡೆಸ್ಕ್: ವಧುವಿನ ಮನೆಯವರು ವರನ ಸ್ನೇಹಿತರಿಗೆ ಚಿಕನ್ ನೀಡಿಲ್ಲ ಎಂದು ವರ ಮದುವೆ ನಿರಾಕರಿಸಿರುವ ಘಟನೆ ಹೈದರಾಬಾದ್ನ ಜೀಡಿಮೆಟ್ಲಾ ಉಪಪ್ರದೇಶವಾದ ಶಹಪುರ್ ನಗರದಲ್ಲಿ ನಡೆದಿದೆ.
ತೆಲಂಗಾಣದ ವರನಿಗೆ ಬಿಹಾರ ಮೂಲದ ವಧುವಿನ ಜೊತೆ ಮದುವೆಯ ಮಾತುಕಥೆ ನಡೆದಿತ್ತು. ವರನ ಕಡೆಯವರು ಮದುವೆಯ ಅಡುಗೆ ಜವಾಬ್ದಾರಿಯನ್ನು ಹೆಣ್ಣಿನ ಕಡೆಯವರಿಗೆ ವಹಿಸಿದ್ದರು. ಆದರೆ ವಧುವಿನ ಮನೆಯವರು ಮನೆ ವೆಜೀಟೆರಿಯನ್ಗಳಾಗಿದ್ದರು. ಯಾವುದೇ ಬಗೆಯ ನಾನ್ವೆಜ್ ತಿಂಡಿಗಳನ್ನು ಮಾಡಿರಲಿಲ್ಲ. ರಿಸೆಪ್ಶನ್ ಮುಗಿಯುತ್ತಿದ್ದಂತೆ ವರನ ಸ್ನೇಹಿತರು ಊಟಕ್ಕೆಂದು ಬಂದಿದ್ದಾರೆ. ಈ ವೇಳೆಯಲ್ಲಿ ಚಿಕನ್ ಇಲ್ಲದಕ್ಕಾಗಿ ಮಾತಿಗೆ ಮಾತು ಬೆಳೆದು ವಧುವಿನ ಕಡೆಯವರಿಗೂ ವರನ ಸ್ನೇಹಿತರಿಗೂ ಜಗಳವಾಗಿದೆ. ಇದರಿಂದಾಗಿ ವರನ ಸ್ನೇಹಿತರೂ ಕೋಪಗೊಂಡು ಊಟವನ್ನು ಮಾಡದೇ ಅಲ್ಲಿಂದ ಹಾಗೇ ಹೊರಟಿದ್ದಾರೆ. ಅದಕ್ಕಾಗಿ ವರ ಮದುವೆಯನ್ನು ನಿರಾಕರಿಸಿದ್ದಾನೆ.