ವಿಜಯಪುರ: ಭಾರೀ ಗಾಳಿಗೆ ವಿದ್ಯುತ್ ಕಂಬಗಳು ಹಾಗೂ ಬೃಹತ್ ಮರ ನೆಲಕ್ಕೆ ಉರುಳಿ ಬಿದ್ದಿರುವ ಘಟನೆ ವಿಜಯಪುರ ನಗರದ ಸುಹಾಗ್ ಕಾಲೋನಿಯಲ್ಲಿ ಶುಕ್ರವಾರ ನಡೆದಿದೆ. ಇನ್ನೂ ವಿದ್ಯುತ್ ಕಂಬದಲ್ಲಿ ವಿದ್ಯುತ್ ಇಲ್ಲದ ಕಾರಣ ಯಾವುದೇ ಹಾನಿಯಾಗಿಲ್ಲ. ಅಲ್ಲದೇ, ಬೃಹತ್ ಮರ ಉರುಳಿ ಬಿದ್ದಿರುವ ಪರಿಣಾಮ ಒಂದು ಕುರಿ ಮರಿ ಅಸುನೀಗಿದ್ದು, ಮತ್ತೊಂದೆಡೆ ಪತ್ರಾಸ್ ಮನೆಯೊಂದು ಜಖಂಗೊಂಡಿದೆ. ಯಾವುದೇ ಪ್ರಾಣ ಹಾನಿಯಾಗಿಲ್ಲ.
![](https://karnataka1news.com/wp-content/uploads/2023/06/IMG-20230609-WA0063-1024x576.jpg)