ವಿಜಯಪುರ: ಅಕ್ರಮವಾಗಿ ಮಾವಾ ಮಾರಾಟ ಮಾಡುವಾಗ ಪೊಲೀಸರು ದಾಳಿಗೈದು ಇಬ್ಬರ ವಿರುದ್ಧ ಕೇಸ್ ದಾಖಲು ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ನಡೆದಿದೆ. ಸಂಗಮೇಶ ಸಣ್ಣಕ್ಕಿ, ಪ್ರಶಾಂತ ಸಣ್ಣಕ್ಕಿ ಬಂಧಿತ ಆರೋಪಿಗಳು. ಇನ್ನೂ ಅಕ್ರಮವಾಗಿ ಮಾವಾ ಮಾರಾಟ ಮಾಡುವಾಗ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದು 2100 ಮೌಲ್ಯದ ಮಾವಾ ಜಪ್ತಿಗೈದಿದ್ದಾರೆ. ಈ ಕುರಿತು ದೇವರಹಿಪ್ಪರಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.