ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಮಹಾಪೌರರಾಗಿ ಎಂ.ಎಸ್.ಕರಡಿ ಹಾಗೂ ಉಪ ಮಹಾಪೌರರಾಗಿ ಶ್ರೀಮತಿ ಸುಮಿತ್ರಾ ಜಾಧವ ಆಯ್ಕೆಯಾಗಿದ್ದಾರೆ. ಆ.7 ಹಾಗೂ ಉಪಮಹಾಪೌರ ಆಯ್ಕೆ ಫಲಿತಾಂಶ ರಂದು ನಿಗದಿಪಡಿಸಿದ್ದ ಸಭೆಯನ್ನು ಆ. 11ಕ್ಕೆ ಮುಂದೂಡಲಾಗಿತ್ತು. ಜನೆವರಿ& ಫೆಬ್ರುವರಿಯಲ್ಲಿ ಜರುಗಿದ ವಿಜಯಪುರ ಮಹಾನಗರ ಪಾಲಿಕೆಯ 22ನೇ ಮಹಾಪೌರರ ಹಾಗೂ ಉಪ ಮಹಾಪೌರರ ಆಯ್ಕೆಯ ಚುನಾವಣೆ ಫಲಿತಾಂಶಷಣಾ ಸಭೆಯನ್ನು ಇಂದು ಹಮ್ಮಿಕೊಳ್ಳಲಾಗಿತ್ತು. ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆನವರ ಘೋಷಿಸಿದರು. ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾರ್ ನಲ್ಲಿಯೇ ನೂತನ ಮೇಯರ್ ಉಪಮೇಯರ್ ಆಗಮಿಸಿದ್ದರು. ಮೊದಲ ಬಾರಿಗೆ ಬಿಜೆಪಿ ಪಾಲಿಕೆ ಚುಕ್ಕಾಣಿ ಹಿಡಿದಿದೆ.