ಬೆಂಗಳೂರು:
ಸಿಲಿಕಾನ ಸಿಟಿಯಲ್ಲಿ ದಿನದಿಂದ ದಿನಕ್ಕೆ ದೇಶ ಹಾಗೂ ವಿದೇಶದಿಂದ ಜನರ ಪ್ರಯಾಣ ಹೆಚ್ಚಾಗುತ್ತಿದ್ದು ಈಗಿರುವ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಜನ ಸಂಖ್ಯೆ ದಟ್ಟನೆಯಾಗುತ್ತಿದೆ ಹೀಗಾಗಿ ಮುಂದಿನ ದಿನಗಳ್ಳಿ ಇನ್ನೂ ಹೆಚ್ಚಿನ ಜನರು ವಿಮಾನ ಪ್ರಯಾಣ ಅವಲಂಬಿಸಿರುವ ಸಾಧ್ಯತೆಹೆಚ್ಚಾಗಿರುವುದರಿಂದ ಮುಂದಿನ ಆಲೋಚನೆ ಮಾಡಿಕೊಂಡು ಈಗ ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣದ ಪ್ರಕ್ರೀಯೆ ಪ್ರಾರಂಭಿಸಲು ಮುಂದಾಗಿದ್ದು ನಿನ್ನೆ ಬೆಂಗಳೂರು ಉಸ್ತುವಾರಿ ಸಚಿವರು ಹಾಗೂ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ ಮತ್ತು ಅಧಿಕಾರಿಗಳ ಜೋತೆಗೆ ಸಭೆ ನಡೆಸಿ ಸುಮಾರು 10 ಕಡೆ ಸ್ಥಳ ಪರಿಶಿಲನೆ ಮಾಡಿರುವ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ತಿರ್ಮಾಣಿಸಲಾಗಿದೆ ಎಂದು ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ಎಲ್. ಕೆ. ಅತೀಕ್ ಮತ್ತು ಸಂಬಂಧಿಸಿದ ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ವಿಸ್ತೃತ ಚರ್ಚೆ ನಡೆಸಿ, ನಂತರ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು.