ವಿಜಯಪುರ: ನನ್ನ ಹಾಗೂ ನನ್ನ ಕುಟುಂಬಸ್ಥರ ಮೊಬೈಲ್ ಮಾಹಿತಿ ತೆಗೆಯಲಾಗುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಮಹಾನಿರೀಕ್ಷಕರಿಗೆ ಎಂ ಬಿ ಪಾಟೀಲ ದೂರು ದಾಖಲು ಮಾಡಿದ್ದಾರೆ. ಬಬಲೇಶ್ವರದಲ್ಲಿ ಕೆಲವರು ದುರುದ್ದೇಶದಿಂದ ಬೇರೆ ಬೇರೆ ಜಿಲ್ಲೆಗಳಲ್ಲಿ ಕಾಲ್ ಹಿಸ್ಟರಿ ತೆಗೆಸುತ್ತಿದ್ದಾರೆ. ಬೆಳಗಾವಿ ಬಾಗಲಕೋಟೆ ಕಲಬುರಗಿ ಹಾಗೂ ಇತರೆ ಜಿಲ್ಲೆಗಳಲ್ಲಿ ಕಾಲ್ ಹಿಸ್ಟರಿ ತೆಗೆಸಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ನಮ್ಮ ವಿರೋಧಿಗಳು ಈ ಕೃತ್ಯ ಮಾಡುತ್ತಿದ್ದಾರೆ. ನನ್ನ ಮೊಬೈಲ್ ಕರೆ ಮಾಹಿತಿ, ನನ್ನ ಪತ್ನಿ ಆಶಾ ಪಾಟೀಲ್, ಸಹೋದರ ಹಾಗೂ ಪರಿಷತ್ ಸದಸ್ಯ ಸುನಿಲಗೌಡ ಪಾಟೀಲ್, ಪುತ್ರ ಬಸನಗೌಡ ಪಾಟೀಲ್, ಹಾಗೂ ಬಿ ಎಲ್ ಡಿ ಇ ಪ್ರಚಾರ ಅಧಿಕಾರಿ ಮಹಾಂತೇಶ ಬಿರಾದಾರ ಕಾಲ್ ಹಿಸ್ಟರಿ ತೆಗೆಸುತ್ತಿದ್ದಾರೆ. ಇದು ವೈಯಕ್ತಿಕ ಮಾಹಿತಿ ಕಸಿಯುವ ಯತ್ನವಾಗಿರುತ್ತದೆ ಎಂದು ದೂರಿನಲ್ಲಿ ಉಲ್ಲೇಖವಿದೆ. ಅದಕ್ಕಾಗಿ ನಮ್ಮೆಲ್ಲರ ಕಾಲ್ ಹಿಸ್ಟರಿಗಳನ್ನ ಯಾರಿಗೂ ನೀಡದಂತೆ ಮನವಿ ಮಾಡಿದ್ದಾರೆ.