ವಿಜಯಪುರ: ಮೊದಲು ಆಲಮಟ್ಟಿ ಡ್ಯಾಂ ತುಂಬಬೇಕು. ತದನಂತರ ಸಿಎಂ ಸಿದ್ದರಾಮಯ್ಯ ಆಲಮಟ್ಟಿ ಡ್ಯಾಂಗೆ ಬಾಗಿನ ಅರ್ಪಣೆ ಮಾಡುತ್ತಾರೆ ಎಂದು ಸಚಿವ ಎಂಬಿ ಪಾಟೀಲ ಹೇಳಿದರು.
ವಿಜಯಪುರ ನಗರದಲ್ಲಿ ಶನಿವಾರ ಮಾಧ್ಯಮದ ಎದುರು ಮಾತನಾಡಿದ ಅವರು, ಮೊನ್ನೆ ಕೆಲ ದಿನ ಒಳ ಹರಿವು ಹೆಚ್ಚಿತ್ತು.
ಈಗ ಒಳ ಹರಿವು ಕಡಿಮೆಯಾಗಿದೆ. ಆತುರ ಬೇಡ.. ಈಗ ಕೆನಾಲ್ಗಳಿಗೆ ನೀರು ಹರಿಸುವ ಕೆಲಸ ಮಾಡ್ತಿದ್ದೇವೆ.
ಈ ವಿಷಯದಲ್ಲಿ ಬಹಳ ಜಾಗರೂಕತೆಯಿಂದ ನಡೆಯಬೇಕಿದೆ. ಕೆಬಿಜೆಎನ್ಎಲ್ ಎಂಡಿ ಜೊತೆಗೆ ಮಾತಮಾಡಿದ್ದೇನೆ. ಬಾಗೀನ ಅರ್ಪಣೆಗೆ ಆತುರ ಬೇಡ ಎಂದರು. ಅಲ್ಲದೇ, ದೇಶ, ರಾಜ್ಯದಲ್ಲಿ ಕಾನೂನು ಇದೆ.
ಕಾನೂನು ತನ್ನ ಕ್ರಮ ಕೈಗೊಳ್ಳಲಾಗುತ್ತದೆ. ತಪ್ಪಿತಸ್ಥರ ವಿರುದ್ಧ ತನಿಖೆ ನಡೆಯುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂದು ಉಡುಪಿ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದರು. ಪ್ರಕರಣದಲ್ಲಿ ನಿರಪರಾಧಿಗಳ ಟಾರ್ಗೆಟ್ ಆಗ್ತಿದ್ರೆ, ಅದು ಆಗಬಾರದು. ಬಿಜೆಪಿ ಹೇಳಿಕೆ ವಿರುದ್ಧ ಎಂಬಿಪಿ ಗರಂಯಾಗಿದ್ದು, ನಾವು ಬಿಜೆಪಿ ಮಾತು ಕೇಳಿ ಆಡಳಿತ ನಡೆಸುತ್ತಿಲ್ಲ. ಬಿಜೆಪಿಯನ್ನ ಜನರೇ ತಿರಸ್ಕರಿಸಿದ್ದಾರೆ. ತಿರಸ್ಕಾರವಾದ ಜನರ ಬಗ್ಗೆ ನನ್ನ ಮುಂದೆ ಹೇಳಲು ಹೋಗ್ಬೇಡಿ ಎಂದರು.