ವಿಜಯಪುರ: ಪಠ್ಯದಲ್ಲಿ ಬಸವಣ್ಣನವರಿಗೆ ಅಪಮಾನ ವಿಚಾರದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ವರದಿ ಕೇಳಿದ್ದಾರೆ ಎಂದು ವಿಜಯಪುರದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಹೇಳಿದರು.
ಇನ್ನು ವರದಿ ಬಳಿಕ ಸರಿಪಡಿಸಲಾಗುವುದು. ಸಿಎಂ ಬೊಮ್ಮಾಯಿ ಜವಾಬ್ದಾರಿ ತೆಗೆದುಕೊಂಡಿದ್ದಾರೆ ಎಂದರು. ಅಲ್ಲದೇ, ವಾದ ವಿವಾದಗಳು ಬರುವುದು ಸಾಮಾನ್ಯ ಆಗಿದೆ. ಯಾರ ಮನಸ್ಸಿಗೂ ಧಕ್ಕೆ, ನೋವು ಆಗದಂತೆ ಸರ್ಕಾರ ನಿರ್ಧಾರ ಮಾಡುತ್ತದೆ. ಎಲ್ಲರೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ ಎಂದರು.