ವಿಜಯಪುರ: ಕಬ್ಬು ಬೆಳೆಗಾರರು ಎಣ್ಣೆ ಹೊಡೆಯಲು ಹೋಗ್ತಾರೆ ಎಂದು ಸಚಿವ ಉಮೇಶ ಕತ್ತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಕಬ್ಬು ಬೆಳೆಗಾರರು ಬಾರ್ಗಳಿಗೆ ಹೋಗ್ತಾರೆ. ನಿಮಗೆ ಖರೆ ಹೇಳೋದಂದ್ರೆ ಈಗ ಕಬ್ಬಿಗೆ ನೀರು ಹಾಯಿಸುವಂತಿಲ್ಲ. ಮೋಟಾರ್ ಬಟನ್ ಒತ್ತಿ ಸೈಕಲ್ ಮೋಟಾರ್ ಕಿಕ್ ಹೊಡೆದು ಹೋಗ್ತಾರೆ ಅಂತಾ ಹೇಳಿಕೆ ನೀಡಿ ರೈತರ ಕೆಂಗಣ್ಣಿಗೆ ಸಚಿವ ಕತ್ತಿ ಗುರಿಯಾಗಿದ್ದಾರೆ. ಇನ್ನು ನಾನೊಬ್ಬ ಕಬ್ಬು ಮಾಲೀಕನಾಗಿ ಹೇಳುತ್ತಿದ್ದೇನೆ. ಇನ್ನು ಬಹಳ ಮಂದಿಗೆ ಕಬ್ಬಿನ ಬಿಲ್ ಬರುವುದಿಲ್ಲ ಎಂದರು.