ವಿಜಯಪುರ: ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಇಂದು ಸೋಮವಾರ ಸುಕ್ಷೇತ್ರ ಕತಕನಹಳ್ಳಿ(ಕತ್ನಳ್ಳಿ)ಗೆ ತೆರಳಿ ಶ್ರೀಗಳ ದರ್ಶನ ಮಾಡಿ ಆಶೀರ್ವಾದ ಪಡೆದರು.
ಕತಕನಹಳ್ಳಿಯಲ್ಲಿ ಯುಗಾದಿ ಅಂಗವಾಗಿ ಶ್ರೀ ಗುರುಚಕ್ರವರ್ತಿ ತ್ರಿಕಾಲಜ್ಞಾನಿ ಸದಾಶಿವ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮಠಕ್ಕೆ ತೆರಳಿದ ಸಚಿವರು ಬಬಲಾದಿ- ಚಮಕೇರಿ- ಕತ್ನಳ್ಳಿ ಮಠದ ಶ್ರೀ ಶಿವಯ್ಯ ಮಹಾಸ್ವಾಮಿಗಳ ದರ್ಶನ ಮಾಡಿ ಸಚಿವರು ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮಾತೋಶ್ರೀ ಮಹಾದೇವಿ ಅಮ್ಮನವರು ಉಪಸ್ಥಿತರಿದ್ದರು ಸಚಿವ ಎಂ. ಬಿ. ಪಾಟೀಲ ಅವರು ವಿಜಯಪುರ ತಾಲೂಕಿನ ಸುಕ್ಷೇತ್ರ ಕತಕನಹಳ್ಳಿ(ಕತ್ನಳ್ಳಿ)ಗೆ ತೆರಳಿ ಯುಗಾದಿ ಅಂಗವಾಗಿ ನಡೆಯುತ್ತಿರುವ ಶ್ರೀ ಗುರುಚಕ್ರವರ್ತಿ ತ್ರಿಕಾಲಜ್ಞಾನಿ ಸದಾಶಿವ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡರು. ಅಲ್ಲದೇ, ಬಬಲಾದಿ- ಚಮಕೇರಿ- ಕತ್ನಳ್ಳಿ ಮಠದ ಶ್ರೀ ಶಿವಯ್ಯ ಮಹಾಸ್ವಾಮಿಗಳ ದರ್ಶನ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.