ವಿಜಯಪುರ: ವಿಜಯಪುರ: ಕಳೆದ ಬಾರಿಯ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಸಚಿವ ಮುರುಘೇಶ ನಿರಾಣಿ ಎರಡು ಕೋಟಿ ಖರ್ಚು ಮಾಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಚಿವ ನಿರಾಣಿ ವಿರುದ್ಧ ಕಿಡಿಕಾರಿದರು.
ನಗರದಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಎಸ್ಕೆ ಬೆಳ್ಳುಬ್ಬಿಗೆ ನಗರ ಕ್ಷೇತ್ರದಿಂದ ನಿಲ್ಲಿಸಿ ಎರಡು ಕೋಟಿ ಹಣ ನೀಡಿದ್ದಾರೆ ಎಂದು ಆರೋಪ ಮಾಡಿದ್ದರು. ನಗರದಲ್ಲಿ 20 ಸಾವಿರ ಮತದಾರರು ಇದ್ದಾರೆ. ಅದಕ್ಕಾಗಿ ಬೆಳ್ಳುಬ್ಬಿ ನಿಲ್ಲಿಸಿ ಯತ್ನಾಳ ಸೋಲಿಸಲು ಪ್ರಯತ್ನ ಮಾಡಿದ್ದು, ಆದ್ರೇ, ಬೆಳ್ಳುಬ್ಬಿಗೆ ಗಾಣಿಗೇರ ಸಮಾಜದವರೇ ಮತದಾನ ನೀಡಿಲ್ಲ ಎಂದರು. ಅಲ್ಲದೇ, ಗಾಣಿಗೇರ ಸಮಾಜದ ಒಂದು ವಾಟ್ಸ್ಆಫ್ ಕೂಡಿ ಮಾಡಿಕೊಂಡು ಪ್ರಚಾರ ಮಾಡಿದ್ದು, ಆದ್ರೇ, ಆ ಗ್ರೂಪ್ ನಲ್ಲಿ ಗಾಣಿಗೇರ ಸಮಾಜದವರು ಯತ್ನಾಳಯವರಿಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ ಎಂದು ಸಚಿವ ನಿರಾಣಿಗೆ ಶಾಸಕ ಯತ್ನಾಳ ಟಾಂಗ್ ನೀಡಿದರು.