ವಿಜಯಪುರ: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ 9 ಲಕ್ಷ 80ಸಾವಿರ ಕೋಟಿ ಕರ್ನಾಟಕಕ್ಕೆ ಹೂಡಿಕೆ ತಂದಿದ್ದೇವೆ ಎಂದು
ವಿಜಯಪುರದಲ್ಲಿ ಶನಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು. ಅವಳಿ ಜಿಲ್ಲೆಗಳಿಗೆ ಹತ್ತು ಸಾವಿರ ಕೋಟಿಗೂ ಹೆಚ್ಚು ಕೈಗಾರಿಕೆಯಷ್ಟು ಪ್ರದೇಶಗಳು ಬರ್ತಿವೆ. ಇನ್ನು ಐದು ಹೊಸ ಏರ್ರ್ಪೋರ್ಟ್ ಬರಲಿದ್ದು, ಹಲಕುರ್ಕಿ, ಕೊಪ್ಪಳ, ರಾಯಚೂರು, ದಾವಣಗೆರೆ, ಚಿಕ್ಕಮಗಳೂರಿನಲ್ಲಿ ಆಗಲಿವೆ.
ಪ್ರತಿ ೧೦೦ಕಿಮಿ ಗೆ ಒಂದರಂತೆ ಕರ್ನಾಟಕದಲ್ಲಿ ಏರಪೋರ್ಟ ಆಗಲಿವೆ ಎಂದರು. ಐದು ಸಾವಿರ ಕಿಲೊಮೀಟರ್ ನಷ್ಟು ಕರ್ನಾಟಕದಲ್ಲಿ ಹೊಸ ನ್ಯಾಷನಲ್ ಹೈವೆ ಗಳು ಬರ್ತಿವೆ. ಏರ್, ರೋಡ್, ವಾಟರ್, ಕರೆಂಟ್ ಕನೆಕ್ಟಿವಿಟಿ ಬಂದಾಗ ಕೈಗಾರಿಕೆಗೆ ಅನುಕೂಲ ಆಗ್ತದೆ ಎಂದರು.