ವಿಜಯಪುರ: ದೇಶದ್ರೋಹಿ ಕೆಲಸ, ದೇಶದ ಅನ್ನ ತಿಂದು ಮೋಸ ಮಾಡುವವರನ್ನು ಹದ್ದು ಬಸ್ತಿಗೆ ತರಬೇಕು ಎಂದು ವಿಜಯಪುರ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಇನ್ನೂ ಅಗ್ನಿಪಥ್ ಯೋಜನೆ ಒಳ್ಳೆಯದು ಆಗಿದೆ. ದೇಶ ಉಳಿಯಬೇಕಿದ್ರೇ ಅಗ್ನಿಪಥ್ ಯೋಜನೆ ಬೇಕಿದೆ. ದೇಶ ದ್ರೋಹಿಗಳಿಗೆ ಬುದ್ಧಿ ಕಲಿಸಬೇಕಿದೆ ಎಂದರು. ಇನ್ನು ಸಚಿವ ಸಂಪುಟ ಬೇಡ. ಸಿಎಂ ಬೊಮ್ಮಾಯಿ ಇರುವವರೆಗೂ ಮಂತ್ರಿ ಮಂಡಳ ರಚನೆ ಬೇಡ. ಇರುವ ಪುಣ್ಯಾತಮರು ಕೆಲಸ ಮಾಡ್ಲಿ. ಆದ್ರೇ, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ ವಿರುದ್ಧ ಶಾಸಕ ಯತ್ನಾಳ ಅಸಮಾಧಾನ ಹೊರ ಹಾಕಿದ್ದು, ಡಯಾಲಿಸಸ್ ಬಗ್ಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಹೊರಗಡೆಗೆ ಹೋದ್ರೆ 2500 ರೊಕ್ಕಾ ಕೊಡಬೇಕು. ಅದಕ್ಕಾಗಿ ನಾನು ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಡಯಾಲಿಸಸ್ ಜಿಲ್ಲಾಸ್ಪತ್ರೆಗೆ ನೀಡಬೇಕು. ಅಲ್ಲದೇ, ಕಲ್ಕತ್ತಾಗೆ ನೀಡಿರುವ ಟೆಂಡರ್ ರದ್ದು ಪಡಿಸಬೇಕು ಎಂದರು. ಪಿಎಸ್ಐ ಅಕ್ರಮದಲ್ಲಿ ಪಾಲು ಎಲ್ಲರದು ಇದೆ. ಹಗರಣದಲ್ಲಿ ಯಾರು ಯಾರು ಇದ್ದಾರೆ ಎಂದು ಬಿಚ್ಚಿ ಹೇಳಬೇಕು.
ಅಲ್ಲದೇ, ಇದು ಒಂದು ದೊಡ್ಡ ಹಗರಣ ಇದೆ. ಇದನ್ನು ಮುಚ್ಚಿ ಹಾಕಲು ಯತ್ನ ಮಾಡಲಾಗುತ್ತಿದೆ. ಇನ್ನು ನ್ಯಾಯಾಧೀಶರು ಸ್ಟ್ರಾಂಗ್ ಇದ್ದಾರೆ. ಅದಕ್ಕಾಗಿ ಅವರನ್ನು ಸರ್ಕಾರ ವರ್ಗಾವಣೆ ಮಾಡಬಾರದು. ಅಲ್ಲದೇ, ಈ ಹಗರಣದಲ್ಲಿ ಮಾಜಿ ಸಿಎಂ ಮಗ ಇದ್ದಾರೆ ಎಂದ್ರೇ ಯಾರು..? ದೇವೇಗೌಡರ ಮಗ, ಸಿದ್ದರಾಮಯ್ಯ ಮಗ ಬರ್ತಾರೆ. ಅದಕ್ಕಾಗಿ ಯಾರು ಮಗ ಇದ್ದಾರೆ ಎನ್ನುವುದನ್ನು ಹೇಳಬೇಕು ಎಂದರು.