ವಿಜಯಪುರ: ಬಿಜೆಪಿ ನೇತೃತ್ವದ ಸರ್ಕಾರ ವಿಜಯಪುರದಲ್ಲಿ ಹತ್ತುಸಾವಿರ ಉದ್ಯೋಗ ಸೃಷ್ಟಿಸಲಿದೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ವಿಜಯಪುರ ನಗರದಲ್ಲಿ ಶುಕ್ರವಾರ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಈ ಸಲ ಮತ್ತೇ ಕೇಸರಿ ಶಾಲು ಹಾಕಬೇಕು. ಅದಕ್ಕಾಗಿ ಚುನಾವಣೆಯಲ್ಲಿ ಬೆಳಗ್ಗೆನೆ 70% ಮತದಾನ ಮಾಡಬೇಕು ಎಂದು ಮನವಿ ಮಾಡಿದರು. ಅಲ್ಲದೇ, ನಗರಾದ್ಯಂತ ಅಭಿವೃದ್ಧಿ ಕೆಲಸಗಳು ಆಗಿದ್ದಾವೆ.
ಅದಕ್ಕಾಗಿ ಹಸಿರು ಶಾಲು ಹಾರಾಟ ಮಾಡಬಾರದು. ಚುನಾವಣೆಯಲ್ಲಿ ಗಲಭೆ ಸೃಷ್ಟಿಸಲು ಕಾಣದ ಕೈಗಳು ಕೆಲಸ ಮಾಡುತ್ತವೆ. ನೀವು ಎಚ್ಚರಿಕೆಯಿಂದ ಮತದಾನ ಮಾಡಬೇಕು ಎಂದರು. ರಾಜ್ಯ ಸರ್ಕಾರದ ದೂರದೃಷ್ಟಿಯ ಫಲದಿಂದ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಿ ದ್ರಾಕ್ಷಾರಸ ಉತ್ಪಾದನೆ ಘಟಕ ನಗರದಲ್ಲಿ ಪ್ರಾರಂಭವಾಗಲಿದ್ದು, ಹತ್ತು ಸಾವಿರ ಯುವಕರಿಗೆ ಉದ್ಯೋಗ ಸಿಗಲಿದೆ. ವಿಜಯಪುರ ನಗರ ಅಭಿವೃದ್ಧಿ ಹಿಂದೆದು ಕಂಡರಿಯಲಾರದಷ್ಟು ಅಭಿವೃದ್ಧಿ ಕಂಡಿದೆ. ಕಾಂಗ್ರೆಸ್ ನಾಯಕರಂತೆ ಜನಕ್ಕೆ ಸೀರಿ, ಹಣದಂತ ಯಾವುದೆ ಆಮಿಷ ಒಡ್ಡುವ ಜಯಮಾನ ನನ್ನದಲ್ಲ. ನಾನು ಚುನಾವಣೆಯಲ್ಲಿ ಹಣ ಹೆಂಡ, ಅರಿವೆ ಕೊಡುವದಿಲ್ಲ. ನನ್ನ ಅಭಿವೃದ್ಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಕಾರ್ಯ ನೋಡಿ ಮತ ನೀಡಬೇಕೆಂದರು. ಸಚಿವರಾದ ಸಿ.ಸಿ.ಪಾಟೀಲ, ಗೋವಿಂದ ಕಾರಜೋಳ, ಮಾತನಾಡಿ ಕ್ಷೇತ್ರದ ಶಾಸಕ ಹೇಗಿರಬೇಕು ಎನ್ನುವದಕ್ಕೆ ಯತ್ನಾಳವರೆ ಉದಾಹರಣೆಯಾಗಿದ್ದು ಬರುವ ದಿನಗಳಲ್ಲಿ 50ಸಾವಿರ ಮತಗಳ ಅಂತರದಿಂದ ಗೆಲವು ಸಾಧಿಸಲು ಕಾರ್ಯಕರ್ತರು ಶ್ರಮಿಸಬೇಕೆಂದರು.
ಮಾಜಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, 23ರ ಚುನಾವಣೆ ಬಹಳ ಮಹತ್ವದ್ದಾಗಿದ್ದು ಚುನಾವಣೆ ನಂತರ ಉತ್ತರ ಕರ್ನಾಟಕದಲ್ಲಿ ಬಹಳಷ್ಟು ಬದಲಾವಣೆಯಾಗಲಿದ್ದು 24ಕ್ಕೆ ಮೋದಿ ಮತ್ತೊಮ್ಮೆ ಪ್ರಧಾನಿಗಳಾಗಿ ಪ್ರಪಂಚಕ್ಕೆ ಭಾರತ ದೊಡ್ಡಣ್ಣವಾಗಲಿದೆ ಎಂದರು.