ವಿಜಯಪುರ: ಕಾರು ಡ್ರೈವರ್ ಹತ್ಯೆ ಪ್ರಕರಣ ಹಿನ್ನೆಲೆ ತಾಕತ್ತಿದ್ದರೆ ಸಿಬಿಐ ಮೂಲಕ ತನಿಖೆ ಮಾಡಿಸಿ ಎಂದು ಸಚಿವ ಮುರುಘೇಶ ನಿರಾಣಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸವಾಲು ಹಾಕಿದರು. ವಿಜಯಪುರ ನಗರದಲ್ಲಿ ರವಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 24 ತಾಸಿನಲ್ಲಿ ಈ ಪ್ರಕರಣ ಸಿಎಂ ಸಿಬಿಐಗೆ ಕಳುಹಿಸಬೇಕು. ಸಿಬಿಐಗೆ ಕೊಡದೆ ಹೋದ್ರೆ ಸಚಿವವನ್ನ ಸಂಪುಟದಿಂದ ಸಚಿವ ನಿರಾಣಿಯನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು. ಅಲ್ಲದೇ, ಡ್ರೈವರ್ ಕುಮಾರ ಯಾರು ಎಂದು ಗೊತ್ತಿಲ್ಲ. ಇದೊಂದು ಬ್ಲಾಕ್ ಮೇಲ್ ಆಗಿದೆ. ಬ್ಲಾಕ್ ಮೇಲ್ ಮಾಡಿಕೊಂಡು ಬಂದ ಕೆಲ ಜನರಿದ್ದಾರೆ. ರಾಜಕಾರಣದಲ್ಲಿ ಸುತ್ತಮುತ್ತಲು ಬ್ಲಾಕ್ ಮೇಲರ್ಸ್ ಇದ್ದಾರೆ ಎಂದು ಕಿಡಿಕಾರಿದರು.