ವಿಜಯಪುರ: ಡಾಬಾದಲ್ಲಿ ಕಳ್ಳನೋರ್ವ ತನ್ನ ಕೈಚಳಕ ತೋರಿಸಿ ಮೊಬೈಲ್ ಕಳ್ಳತನಗೈದು ಪರಾರಿಯಾಗಿರುವ ಘಟನೆ ವಿಜಯಪುರದ ಸೋಲಾಪುರ ರಸ್ತೆಯಲ್ಲಿರುವ ರಾಜಸ್ಥಾನಿ ಡಾಬಾದಲ್ಲಿ ನಡೆದಿದೆ.
ಕಳ್ಳ ಡಾಬಾದ ಹಿಂಬದಿಯಿಂದ ಒಳಗಡೆ ನುಗ್ಗಿ ಡಾಬಾ ಮಾಲೀಕನಾದ ಗೋಪಾಲ್ ಎಂಬುವರ ಮೊಬೈಲ್ ಕಳ್ಳತನಗೈದು ಪರಾರಿಯಾಗಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುಮಾರು 18 ಸಾವಿರ ಮೌಲ್ಯದ ಮೊಬೈಲ್ ಕಳ್ಳತನವಾಗಿದೆ. ಆದರ್ಶನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.