K1News ಡೆಸ್ಕ್: ಕಿಂಗ್ ಕೊಹ್ಲಿ ಖ್ಯಾತಿಯ ಇಂಡಿಯನ್ ಫೈಯರ್ ಬ್ರ್ಯಾಂಡ್ನ ವಿರಾಟ್ ಕೊಹ್ಲಿ ಕ್ರಿಕೆಟ್ನ ಸೂಪರ್ ಸ್ಟಾರ್ ಅಟಗಾರ. ಇನ್ನೂ 17ನೇ ಬಾರಿಗೆ ಐಪಿಎಲ್ನಲ್ಲಿ ಒಂದೇ ತಂಡದ ಪರವಾಗಿ ಕಣಕ್ಕಿಳಿಯಲು ಸಜ್ಜಾಗಿದೆ. ಹೀಗಿರುವಾಗಲೇ ವಿರಾಟ್ ಕೊಹ್ಲಿ ಈ ಹಿಂದೆ ನೀಡಿದ್ದ ವಿಡಿಯೋಯೊಂದು ಸಕತ್ ವೈರಲ್ ಆಗುತ್ತಿದೆ. 2024ರ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಹಾಗೂ ತಂಡದಿಂದ ರಿಲೀಸ್ ಮಾಡಲು ನವೆಂಬರ್ 26ರವರೆಗೆ ಕಾಲಾವಕಾಶ ನೀಡಲಾಗಿತ್ತು. ಕೊಹ್ಲಿ ಐಪಿಎಲ್ ಆರಂಭಿಕ ದಿನಗಳಲ್ಲಿ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಸಾಕಷ್ಟು ಪರದಾಟ ನಡೆಸಿದ್ದರು. ಆ ಸಂಕಷ್ಟದ ಸಂದರ್ಭದಲ್ಲಿ ಆಸರೆಯಾಗಿ ನಿಂತಿದ್ದು ಆರ್ಸಿಬಿ ಫ್ರಾಂಚೈಸಿಯಿಂದ ಕೊಹ್ಲಿಗೆ ಆರ್ಸಿಬಿ ಎಂದರೆ ಬಲು ಪ್ರೀತಿ. ಕೊಹ್ಲಿ ಹೇಳಿದ ಮಾತುಗಳು.. ! ನಾನು ಯಾವ ಫ್ರಾಂಚೈಸಿ ಎಂದು ಹೆಸರು ಹೇಳಲ್ಲ. ನಾನಾಗ ಮಧ್ಯ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೆ. ಅವಾಗ ಅಗ್ರಕ್ರಮಾಂಕದಲ್ಲಿ ಆಡಲು ಬಯಸಿದ್ದೆ. ನೀವು ಹರಾಜಿಗೆ ಬನ್ನಿ ಎಂದು ಆಫರ್ ಮಾಡಿದರು. ಆದರೆ ನಾನು ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ನೀವು ಹರಾಜಿಗೆ ಬಂದರೆ 20 ಕೋಟಿ ನೀಡಿ ಬೇಕಿದ್ದರೂ ಖರೀದಿಸುತ್ತೇವೆಂದು ಐಪಿಎಲ್ ಫ್ರಾಂಚೈಸಿ ಆಫರ್ ನೀಡಿತ್ತು. ಆಗ ಕೊಹ್ಲಿ ನಿಯತ್ತು ಮುಖ್ಯವೇ ಹೊರತು ಹಣ ಅಲ್ಲ ಎಂದು ಆ ಆಫರ್ ತಿರಸ್ಕರಿಸಿದ್ದರು. ಇದು ಆರ್ಸಿಬಿ ಕಿಂಗ್ ಕೊಹ್ಲಿ ಮಾತುಗಳು.