![](https://karnataka1news.com/wp-content/uploads/2023/11/IMG_20231127_181326.jpg)
ವಿಜಯಪುರ: ಮಂಕಿ ಕ್ಯಾಪ್ ಧರಿಸಿ ಕಳ್ಳರು ಮನೆಯೊಂದರಲ್ಲಿ ಕಳ್ಳತನಗೈದು ಎಸ್ಕೇಪ್ ಆಗಿರುವ ಘಟನೆ ವಿಜಯಪುರ ನಗರದ ಸವಳಿ ಲೇಔಟ್ನಲ್ಲಿ ನಡೆದಿದೆ. ಸವಳಿ ಲೇಔಟ್ ನಿವಾಸಿ ಶಿವಾನಂದ ಪೂಜಾರಿ ಎಂಬುವರ ಮನೆಯಲ್ಲಿ ದೇವರ ಚಿನ್ನಾಭರಣ ಸೇರಿದಂತೆ 2 ಲಕ್ಷ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಇನ್ನು ಕೈಯಲ್ಲಿ ಮಾರಕಾಸ್ತ್ರ ಹಿಡಿದು ಕಳ್ಳರು ಓಡಾಟ ಮಾಡುತ್ತಿದ್ದಾರೆ.
ಕಳ್ಳರ ಹಾವಳಿ ಸಿಸಿಟಿವಿಯಲ್ಲಿ ವಿಡಿಯೋ ಸೆರೆಯಾಗಿದೆ. ಅಲ್ಲದೇ, ಗೂಡಗಂಗಡಿಗಳಲ್ಲೂ ಕಳ್ಳತನಕ್ಕೆ ಯತ್ನಿಸಿದ್ದಾರೆ. ಗೋಳಗುಮ್ಮಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.