K1N ಡೆಸ್ಕ್: ಅಳಿಯ ಎಂದರೆ ಅತ್ತೆಗೆ ಮಗನ ಸಮಾನ. ಆದರೆ ಈ ಮಹಿಳೆ ಅಳಿಯನೊಂದಿಗೇ ಅನೈತಿಕ ಸಂಬಂಧದಲ್ಲಿ ಇದ್ದಳು. ಅಲ್ಲದೇ, ಮಗಳ ಗಂಡನ ಜೊತೆ ಅತ್ತೆ ಎಸ್ಕೇಪ್ ಆಗಿದ್ದಾಳೆ. ಹೌದು..! ಪೊಲೀಸ್ ತನಿಖೆಯಲ್ಲಿ ಅತ್ತೆ-ಅಳಿಯನ ಪ್ರೇಮ ಪುರಾಣ ಬಯಲು ಆಗಿದೆ. 42 ವರ್ಷದ ಅತ್ತೆ ಮತ್ತು 27 ವರ್ಷದ ಅಳಿಯನ ಪ್ರೇಮಕಥೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಮೂರು ಮಕ್ಕಳ ತಂದೆಯಾಗಿರುವ ವ್ಯಕ್ತಿ, ಜನವರಿ 1 ರಂದು ತನ್ನ ಅತ್ತೆಯೊಂದಿಗೆ ಮನೆಯಿಂದ ಓಡಿ ಹೋಗಿದ್ದಾನೆ. ಇದಕ್ಕೂ ಮುನ್ನ ಅಳಿಯ ಮಾವನಿಗೆ ಮೋಸ ಮಾಡಿ ಮದ್ಯ ಕುಡಿಸಿ, ಪ್ರಜ್ಞೆ ತಪ್ಪುವಂತೆ ಮಾಡಿದ್ದಾನೆ.
ಆ ಬಳಿಕ ಇಬ್ಬರೂ ಮನೆಯಿಂದ ಓಡಿ ಹೋಗಿದ್ದರು. ಮರುದಿನ ಮಾವನಿಗೆ ಪ್ರಜ್ಞೆ ಬಂದಾಗ ಹೆಂಡತಿಗಾಗಿ ಹುಡುಕಾಡಿದ್ದಾನೆ. ಈ ಸಂದರ್ಭದಲ್ಲಿ ಅಳಿಯನೊಂದಿಗೆ ಅತ್ತೆ ಪರಾರಿಯಾಗಿದ್ದಾಳೆ ಎಂಬ ವಿಷಯ ತಿಳಿದು ಬಂದಿದೆ. ಈ ಕುರಿತು ಅಣದಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ಪತಿ ನನ್ನನ್ನು ಕೊಲ್ಲಲು ಯತ್ನಿಸಿದ್ದಾನೆ. ಆದ್ದರಿಂದ ಅಳಿಯನೊಂದಿಗೆ ಓಡಿ ಹೋದೆ ಎಂದು ಪೊಲೀಸರ ಮುಂದೆ ಅತ್ತೆ ಹೇಳಿಕೆ ನೀಡಿದ್ದಾಳೆ. ಆದರೆ ಈ ವ್ಯಕ್ತಿ ಮನೆಗೆ ಪ್ರತಿ ದಿನ ಬರಲು ಸಹಾಯವಾಗುತ್ತದೆ ಎಂದೇ ಮಹಿಳೆ ತನ್ನ ಮಗಳನ್ನು ಆತನಿಗೆ ಕೊಟ್ಟು ವಿವಾಹ ಮಾಡಿದ್ದಾಳೆ ಎಂಬ ಮಾತು ಕೇಳಿಬಂದಿದೆ. ಇದೀಗ ಇಬ್ಬರೂ ಸಾಮಾಜಿಕ ಸ್ತರದಲ್ಲಿ ದೇವಸ್ಥಾನದ ಮುಂದೆ ಪತಿ-ಪತ್ನಿಯೊಂದಿಗೆ ವಾಸ ಮಾಡುವ ಪ್ರತಿಜ್ಞೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.