ವಿಜಯಪುರ: ಚಿಮ್ಮಲಗಿ 2 ಗ್ರಾಮದ ನೀಲಕಂಠ ಸ್ವಾಮೀಜಿ (92) ಲಿಂಗೈಕ್ಯ ಆಗಿದ್ದಾರೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಚಿಮ್ಮಲಗಿ 2 ಗ್ರಾಮದ ಅರಳೆಕೆ ಕಟ್ಟಿಮನಿ ಹಿರೇಮಠದ ಪೀಠಾಧೀಪತಿ ವಯೋ ಸಹಜ ಖಾಯಿಲೆಗಳಿಂದ ಬಳಲುತ್ತಿದ್ದರು. ಅಲ್ಲದೇ, ನಾಳೆ ಸಾಯಂಕಾಲ ನಾಲ್ಕು ಗಂಟೆಗೆ ಸ್ವಾಮೀಜಿ ಅಂತ್ಯಕ್ರಿಯೆ ನಡೆಯಲಿದೆ. ಚಿಮ್ಮಲಗಿ 2 ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇನ್ನೂ ಶ್ರೀಗಳ ಅಗಲಿಕೆಗೆ ಜಿಲ್ಲೆಯ ಹಾಗೂ ಇತರೆ ಮಠಾಧೀಶರ, ರಾಜಕಾರಣಿಗಳ, ಗಣ್ಯರ ಸಂತಾಪ ಸೂಚಿಸಿದ್ದಾರೆ.