ವಿಜಯಪುರ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಜಾರಿ ಹಿನ್ನೆಲೆ ಅಂತರ್ ರಾಜ್ಯಕ್ಕೆ ತೆರಳುವ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇಲ್ಲ ಎಂದು ವಿಜಯಪುರ ನಗರದ ಬಸ್ ನಿಲ್ದಾಣದಲ್ಲಿ ಬಸ್ನಲ್ಲಿ ರವಿವಾರ ಬೋರ್ಡ್ ಹಾಕಲಾಗಿದೆ. ಬಸ್ ಗೆ ಸ್ಟೀಕರ್ ಅಂಟಿಸಿ ಮಹಿಳಾ ಪ್ರಯಾಣಿಕರಿಗೆ ಸಾರಿಗೆ ಇಲಾಖೆ ಶಾಕ್ ಕೊಟ್ಟಿದೆ. ಸ್ಟೀಕರ್ ಅಂಟಿಸಿದ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಭಾಗ್ಯ ಇಲ್ಲ. ಅಂತರ್ ರಾಜ್ಯಕ್ಕೆ ಹೋಗಿ ಬರುವ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇಲ್ಲ ಎಂದು ಬೋರ್ಡ್ ಹಾಕಲಾಗಿದೆ. ಅದಕ್ಕಾಗಿ ಮಹಿಳೆಯರ ಪರವಾಗಿ ಪುರುಷ ಪ್ರಯಾಣಿಕ ಬಸ್ ಚಾಲಕನಿಗೆ ತರಾಟೆ ತೆಗೆದುಕೊಂಡಿದ್ದಾರೆ. ಅದಕ್ಕಾಗಿ
ನಮ್ಮನ್ನು ಕೇಳಬೇಡಿ ಬೋರ್ಡ್ ಹಾಕಿದೆ, ಮಹಿಳೆಯರಿಗೆ ಉಚಿತ ಪ್ರಯಾಣ ಇಲ್ಲ ಎಂದು ಚಾಲಕ ಮಾಹಿತಿ ನೀಡಿದ್ದಾನೆ.
![](https://karnataka1news.com/wp-content/uploads/2023/06/IMG_20230611_171306-1024x578.jpg)