ಬೆಂಗಳೂರು:
ಹಲವಾರು ದಿನಗಳಿಂದ ಕಾರ್ಮಿಕ ಇಲಾಖೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹಲವಾರು ರೀತಿ ತೊಂದರೆ ಆಗುತ್ತಿರುವುದು ಹೇಳುತ್ತಾ ಬಂದಿದೆ ಆದರೆ ಈಗ ಮತ್ತೆ ಐಟಿ,ಬಿಟಿ ಕಂಪನಿಯಲ್ಲಿ ಕೆಲಸ ಮಾಡಲು ಸಮಯ ಸಾಕಾಗುತ್ತಾ ಇಲ್ಲ ಸುಮಾರು 14 ಗಂಟೆಯಾದರೂ ಬೇಕು ಎಂಬ ಬೇಡಿಕೆ ಕೇಳಿ ಬರುತ್ತಿದೆ. ಈಗಾಗಲೇ ಕಾರ್ಮಿಕ ಸಂಘಟನೆಗಳಿಂದ ಕೆಲಸದ ಅವಧಿ ಹೆಚ್ಚಳ ಮಾಡುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಿರುವುದೇ ಕಾರ್ಮಿಕ ವಿರೋಧಿ ನೀತಿಯಾಗಿದೆ. ಅದನ್ನು ಮತ್ತೆ ಎರಡು ತಾಸು ಹೆಚ್ಚಳ ಮಾಡಿದ್ದಲ್ಲಿ ಜೀವ ವಿರೋಧಿ ನೀತಿಯಾಗುತ್ತದೆ. ಹೆಚ್ಚುತ್ತಿರುವ ಕೆಲಸದ ಅವಧಿ, ಒತ್ತಡ, ದೈಹಿಕ ಚಟುವಟಿಕೆ ಕೊರತೆಯಿಂದ ಯುವ ಜನಾಂಗ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಕೆಲಸದ ಅವಧಿ ಜಾಸ್ತಿ ಮಾಡಿದರೆ ಮತ್ತಷ್ಟು ವಿಪರೀತ ಒತ್ತಡಕ್ಕೆ ಉದ್ಯೋಗಿಗಳು ಸಿಲುಕುತ್ತಾರೆ ಎಂದು ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಕೆಲಸದ ಅವಧಿ ವಿಸ್ತರಿಸುವ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲು ಕಿದ್ವಾಯಿ ಆಸ್ಪತ್ರೆ ಸಮೀಪದ ಸಂಭ್ರಮ ಸಭಾಂಗಣದಲ್ಲಿ ಅಕ್ಟೋಬರ್ 8ರಂದು ಕಾನೂನು ಅರಿವು ಕಾರ್ಯಕ್ರಮವನ್ನು ಕಾರ್ಮಿಕ ಇಲಾಖೆ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಕೆಲಸದ ಅವಧಿ ವಿಸ್ತರಣೆ ಸಂಬಂಧ ಅಭಿಪ್ರಾಯ ಸಂಗ್ರಹಿಸಿ ಇದನ್ನು ಆಧರಿಸಿ ಸರ್ಕಾರ ನಿಯಮಾವಳಿ ರೂಪಿಸಲಿದೆ ಎನ್ನಲಾಗಿದೆ.