ವಿಜಯಪುರ: ಪೊಲೀಸ ಠಾಣೆಯ ಪಕ್ಕದಲ್ಲಿ ಎಣ್ಣೆ ಗಮ್ಮತ್ತು ಜೋರಾಗಿದೆ. ವಿಜಯಪುರ ನಗರದ ಹೃದಯ ಭಾಗದಲ್ಲಿರುವ ಗಾಂಧಿಚೌಕ್ ಪೊಲೀಸ ಠಾಣಾ ಪಕ್ಕದ ಫುಟ್ಪಾತ್ನಲ್ಲಿ ಎಣ್ಣೆ ಪ್ರಿಯರು ಜಾಸ್ತಿಯಾಗಿದ್ದಾರೆ. ಮದ್ಯಪ್ರಿಯರು ತಮ್ಮಿಷ್ಟದ ಎಣ್ಣೆ, ನೀರು ಮಿಕ್ಸ್ ಮಾಡಿಕೊಂಡು ಬಾಟಲ್ ತೆಗೆದುಕೊಂಡು ರಾಜಾರೋಷವಾಗಿ ಠಾಣೆಯ ಪಕ್ಕದಲ್ಲಿ ಇಳಿಸುತ್ತಾರೆ. ಅಲ್ಲದೇ, ಕೈಯಲ್ಲಿ ಮದ್ಯಪ್ರಿಯನೊಬ್ಬ ಸಕತ್ ಆಗಿ ಎಣ್ಣೆ ಮಿಕ್ಸ್ ಮಾಡಿಕೊಂಡು ಕುಡಿಯುತ್ತಿರುವ ಫೋಟೊ ಲಭ್ಯವಾಗಿದೆ. ಇದೀಗ್ ಈ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.