ವಿಜಯಪುರ: ಬೈಕ್ನಲ್ಲಿ ಹೋಗುವಾಗ ಸೈಡ್ ನೀಡುವಂತೆ ಹೇಳಿದಕ್ಕೆ ವೃದ್ಧನ್ನು ಓರ್ವ ಹತ್ಯೆಗೈದಿರುವ ಘಟನೆ
ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ಇಂಡಿ ರಸ್ತೆಯಲ್ಲಿ ನಡೆದಿದೆ. ಕಾಂತಪ್ಪ ವಿಭೂತಿಹಳ್ಳಿ ಮೃತಪಟ್ಟಿರುವ ದುರ್ದೈವಿ. ಹಣ್ಣಿನ ವ್ಯಾಪಾರಿ ಅಜೀತ್ ನಂದರಗಿ ಹತ್ಯೆಗೈದಿರುವ ಆರೋಪಿ. ಮಗನೊಂದಿಗೆ ಬೈಕ್ನಲ್ಲಿ ಕಾಂತಪ್ಪ ಹೋಗುವಾಗ ಸೈಡ್ ಹೋಗಲು ಕಾಂತಪ್ಪ ಹೇಳಿದ್ದಾನೆ. ಅದಕ್ಕಾಗಿ ಕಾಂತಪ್ಪ, ಅಜೀತ್ ಮಧ್ಯೆ ಮಾತಿನ ಚಕಮಕಿ ಆಗಿದೆ. ಈ ವೇಳೆ ಅಜೀತ್ ತನ್ನ ಬೈಕ್ನಲ್ಲಿದ್ದ ಹಣ್ಣು ಕತ್ತರಿಸುವ ಚಾಕುವಿನಿಂದ ಕಾಂತಪ್ಪಗೆ ಚುಚ್ಚಿದ್ದಾನೆ. ಇದರಿಂದ ಆಸ್ಪತ್ರೆಯಲ್ಲಿ ಕಾಂತಪ್ಪ ಮೃತಪಟ್ಟಿದ್ದಾನೆ. ಆಲಮೇಲ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.