ವಿಜಯಪುರ/Vijaypur: ಜಿಲ್ಲೆಯ ಆ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ದಿನನಿತ್ಯ “One 6 One” ವಸೂಲಿ ಕುರಿತು ಆರೋಪಗಳು ಕೇಳಿ ಬರುತ್ತಿವೆ. ಆ ನಗರದಲ್ಲಿ ಕಟ್ಟಿಗೆ ಅಡ್ಡೆಯಿಂದ ಕೆಲವರು “One 6 One” ಫಿಕ್ಸ್ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೇ, ಅಕ್ರಮವಾಗಿ ಕಟ್ಟಿಗೆ ಮಾರಾಟ ಮಾಡ್ರೀ ನಮಗ್ “One 6 One” ಫಿಕ್ಸ್ ಮಾಡಿ ಎಂದಿದ್ದಾರೆ ಅಂತೇ ಆ ಕೆಲವರು. ಇನ್ನೂ, ಇದೇ ತರಹ ಆ ಭಾಗದಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಟ, ಅಕ್ರಮ ಗ್ಯಾಸ್ ಫಿಲ್ಲಿಂಗ್ ಸೇರಿದಂತೆ ಹಲವು ಚಟುವಟಿಕೆಗಳು ನಡೆಯುತ್ತಿವೆ. ಆದ್ರೇ, ಇದಕ್ಕೆಲ್ಲ ಯಾರು ಕಡಿವಾಣ ಹಾಕುವವರು ಎಂದು ಪ್ರಜ್ಞಾವಂತರ ಪ್ರಶ್ನೆಯಾಗಿದೆ. ಇದಕ್ಕೆ ಇತಿಶ್ರೀ ಹಾಡುವವರು ಯಾರು ಎಂಬುದು ಕಾಯ್ದು ನೋಡಬೇಕಿದೆ. ಹಾಗೇನೇ ಆ ಕಟ್ಟಿಗೆ ಅಡ್ಡೆಯ “One 6 One” ವಿಡಿಯೋ ಸಮೇತ ಮುಂದಿನ ಭಾಗದಲ್ಲಿ ನಿರೀಕ್ಷಿಸಿ ವೀಕ್ಷಕರೇ..