ವಿಜಯಪುರ: ಡಿಟಿಡಿಸಿ ಕೊರಿಯರ್ ಹೆಸರಿನಲ್ಲಿ ವ್ಯಕ್ತಿಗೆ ಒಂದು ಲಕ್ಷ ನಗದು ಮೋಸಗೈದಿರುವ ಘಟನೆ ವಿಜಯಪುರ ನಗರದ ಗ್ಯಾಂಗ್ ಬಾವಡಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ನಗರದ ಗ್ಯಾಂಗ್ ಬಾವಡಿ ನಿವಾಸಿ ಅಂದಲಿಬ್ ತಿಕೋಟಿಕರ್ ಮೋಸ ಹೋದವರು. ಆನ್ಲೈನ್ ಮೂಲಕ ಅಂದಲಿಬ್ ಬಟ್ಟೆ ಆರ್ಡರ್ ಮಾಡಿದ್ದರು. ಆದ್ರೇ, ಬಟ್ಟೆ ಸರಿಯಾದ ಸಮಯಕ್ಕೆ ಆರ್ಡರ್ ಆಗಿರಲಿಲ್ಲ. ಈ ವೇಳೆ ಅಂದಲಿಬ್ ಆನ್ಲೈನ್ನಲ್ಲಿ ಡಿಟಿಡಿಸಿ ಕಸ್ಟಮರ್ ಕೇರ್ ಸರ್ಚ್ ಮಾಡುವ ಸಂದರ್ಭದಲ್ಲಿ ಅನಾಮಧೇಯ ವ್ಯಕ್ತಿ ಕರೆ ಮಾಡಿದ್ದಾನೆ. ನಿಮ್ ಕೊರಿಯರ್ ಸ್ಟಕ್ ಆಗಿದೆ. ಅದಕ್ಕಾಗಿ ನೀವು ಒಂದು ಲಿಂಕ್ (Online) ಮೂಲಕ ಐದು ನಗದು ಕಳುಹಿಸಿಕೊಟ್ಟಿದ್ದಾರೆ. ತದನಂತರ 80 ಸಾವಿರ ಹಾಗೂ 20 ಸಾವಿರ ನಗದು ಕಟ್ ಆಗಿದೆ. ಅದಕ್ಕಾಗಿ ನಾನು ಮೋಸ ಹೋಗಿದ್ದೇನೆ ಎಂದು ದೂರು ದಾಖಲು ಮಾಡಿದ್ದಾನೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.